- Advertisement -
National News: ಮುಂದಿನ ವರ್ಷ ಜನವರಿ 22ಕ್ಕೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈಗಿಂದಲೇ, ಹಲವು ಗಣ್ಯರಿಗೆ ಆಮಂತ್ರಣ ಪತ್ರಿಕೆ ಕೂಡ ಕಳಿಸಲಾಗಿದೆ. ಇದೀಗ ಹೊಸ ವಿಷಯ ಏನಂದ್ರೆ, ಅಯೋಧ್ಯೆಯ ರೈಲು ನಿಲ್ದಾಣಕ್ಕೆ ಅಯೋಧ್ಯಾ ಧಾಮ್ ಎಂದು ನಾಮಕರಣ ಮಾಡಲಾಗಿದೆ. ಈ ರೈಲು ನಿಲ್ದಾಣವನ್ನು ಪ್ರಧಾನಿ ಮೋದಿ ಬಂದು ಉದ್ಘಾಟನೆ ಮಾಡಲಿದ್ದಾರೆ.
ಡಿಸೆಂಬರ್ 30ರಂದು ಅಯೋಧ್ಯಾ ಧಾಮದ ಉದ್ಘಾಟನೆ ನಡೆಯಲಿದ್ದು, ಜನರ ನಿರೀಕ್ಷೆಯಂತೆ ರೈಲ್ವೆ ನಿಲ್ದಾಣದ ಹೆಸರನ್ನು ಬದಲಿಸಲಾಗಿದೆ. ಇನ್ನೊಂದು ವಿಶೇಷ ಅಂದ್ರೆ, ಇಲ್ಲಿರುವ ನಿಲ್ದಾಣದ ಮುಖ್ಯ ಕಟ್ಟಡವನ್ನು, ರಾಮಮಂದಿರದಂತೆ ನಿರ್ಮಿಸಲಾಗಿದೆ. ಗೋಡೆಗಳ ಮೇಲೆ ರಾಮನ ಚಿತ್ರ, ರಾಮನ ಜೀವನ ಚರಿತ್ರೆಯನ್ನು ಕೆತ್ತಲಾಗಿದೆ.
- Advertisement -

