Kolar News: ಕೋಲಾರ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಕೋಲಾರದಲ್ಲಿ ಬಿಜೆಪಿ ಎಂ.ಎಲ್.ಸಿ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಮೊದಲು ಸುಳ್ಳು ಸುದ್ದಿ ಹಬ್ಬಿಸಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಮೇಲೆ ಕ್ರಮ ಕೈಗೊಳ್ಳಬೇಕು. ನಾವು ಬಂದ ೨೪ ಗಂಟೆಯಲ್ಲಿ ಎಲ್ಲಾ ಜಾರಿಗೊಳಿಸುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ಪೇ ಸಿಎಂ ಅಂತ ಪೋಸ್ಟರ್ ಹಂಚಿದ್ದಾರೆ. ಇದರ ಅರ್ಥ ಸಿಎಂಗೆ ದುಡ್ಡು ಕೊಡಬೇಕು ಅಂತ ಸುಳ್ಳು ಹೇಳಿದ್ದಾರೆ ಅದನ್ನು ಸಾಬೀತು ಮಾಡಿಲ್ಲ. ೪೦% ಸರ್ಕಾರ ಅಂತ ಆರೋಪ ಮಾಡಿ ಸುದ್ದಿ ಹಬ್ಬಿಸಿದ್ದಾರೆ. ಈವರೆಗೂ ೧% ಸಹ ಸಾಬೀತು ಮಾಡಿಲ್ಲ. ಈ ಎರಡೂ ಮೇಲೆ ಇವರ ಮೇಲೆ ಕೇಸು ಹಾಕಬೇಕು. ನೀವು ಆರೋಪ ಮಾಡಿ ಸಾಬೀತ ಮಾಡಿಲ್ಲ ಅಂದ್ರೆ ಸುಳ್ಳು ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ೪೦% ಕಮೀಷನ್ ಆರೋಪ ಕುರಿತು ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಕಾಂಗ್ರೆಸ್ ಸರ್ಕಾರ ಬಂದು ಎರಡು ತಿಂಗಳಾಗಿದೆ. ಈವರೆಗೂ ರಾಜ್ಯದಲ್ಲಿ ಕಮೀಷನ್ ಎಷ್ಟು ಕಡಿಮೆ ಆಗಿದೆ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಕೆಂಪಣ್ಣ ಬಗ್ಗೆ ನನಗೆ ಅಪರಾವಾದ ಗೌರವ ಇದೆ. ಈಗ ಕೆಂಪಣ್ಣ ಕಥೆ ಏನಾಗಿದೆ ಗೊತ್ತಾ..? ರಾಜ್ಯದಲ್ಲಿ ಗುತ್ತಿಗೆದಾರರಿಗೆ ೨೬ ಸಾವಿರ ಕೋಟಿ ಬಿಲ್ಲುಗಳು ಬಾಕಿ ಇದೆ. ಸರ್ಕಾರದ ಬಂದ ತಕ್ಷಣ ಎಲ್ಲಾ ದುಡ್ಡನ್ನ ನಿಲ್ಲಿಸಿದ್ದಾರೆ. ಈಗ ಸರ್ಕಾರಕ್ಕೆ ಬಂದವರ ಜೇಬು, ಹೊಟ್ಟೆ ಕಾಲಿ ಇತ್ತು. ಅದನ್ನ ತುಂಬಿಸಿಕೊಳ್ಳೋಕೆ % ಫಿಕ್ಸ್ ಮಾಡೋಕೆ ನಿಲ್ಲಿಸಿದ್ದಾರೆ. ಕೆಂಪಣ್ಣ ಹೀಗೆ ಇಷ್ಟು ೬೦% ಅಂತ ಹೇಳಿದ್ರೆ ನಿಲ್ಲಿಸಿರುವ ಕಾಮಗಾರಿಗಳ ಬಿಲ್ಲು ಬಿಡುಗಡೆಯಾಗುತ್ತೆ. ಈವರೆಗೂ ನೀವು ಹೋಗಿಲ್ಲ. ರಿಲೀಸ್ ಆಗಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದ್ದಾರೆ.
ನಿರ್ವಾಹಕಿಯನ್ನ ಅಸಹ್ಯವಾಗಿ ನಿಂದಿಸಿದ ವೃದ್ಧೆ: ಬಸ್‌ನಲ್ಲಿಯೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ ನಿರ್ವಾಹಕಿ