ಗ್ಲಾಕೋಮ ಅರಿವು ಕಾರ್ಯಕ್ರಮ
ಪಂಚೇಂದ್ರಿಯಗಳಲ್ಲಿ ಕಣ್ಣು ಬಹಳ ಮುಖ್ಯವಾದುದು. ಕಣ್ಣಿಗೆ ಅನೇಕ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಅದರಲ್ಲಿ ಗ್ಲಾಕೋಮ ಸಹ ಒಂದು. ಇದನ್ನು “ನಿಶ್ಯಬ್ಧ ದೃಷ್ಟಿಚೋರ ಸ್ಥಿತಿ” ಅಥವಾ “ಸೈಲೆಂಟ್ ಥೀಫ್ ಆಫ್ ಸೈಟ್” ಎನ್ನುತ್ತಾರೆ. ಈ ಸಮಸ್ಯೆ ಬರುವ ಮುನ್ನ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ನಿಧಾನವಾಗಿ ಅಂಧತ್ವ ಆವರಿಸುತ್ತದೆ. ಆದ್ದರಿಂದ ಸಾಮಾನ್ಯವಾಗಿ ೪೦ ವರ್ಷ ವಯಸ್ಸಿನ ನಂತರ ಬರಬಹುದಾದ ಈ ಸಮಸ್ಯೆಗೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯವಾಗಿದೆ.
ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ವಿಶ್ವ ಗ್ಲಾಕೋಮ ಅರಿವು ಸಪ್ತಾಹ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ನಾರಾಯಣ ನೇತ್ರಾಲಯವು ವಾರವಿಡೀ ಗ್ಲಾಕೋಮ ಅರಿವಿನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ದಿನಾಂಕ: ೧೭-೦೩-೨೦೨೩ ರಂದು ಡಾ।। ರಾಜ್ ಕುಮಾರ್ ರಸ್ತೆಯ ಒರಾಯನ್ ಮಾಲ್ ನಲ್ಲಿ ಅರಿವು ಕಾರ್ಯಕ್ರಮ ಏರ್ಪಡಿಸಿತ್ತು ಸಮರ್ಥನಂ ಹಾಗೂ ಎ ಟಿಪಿಕಲ್ ಅಡ್ವಾಂಟೇಜ್ ವಿಶೇಷ ಚೇತನರಿಂದ ಸಂಗೀತ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದಿ. ಡಾ।। ಪುನೀತ್ ರಾಜಕುಮಾರ್
ರವರ ‘ಬೊಂಬೆ ಹೇಳುತೈತೆ’ ಗೀತೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ, ನಾರಾಯಣ ನೇತ್ರಾಲಯದ ವೈದ್ಯರು ಹಾಗೂ ಸಿಬ್ಬಂದಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವರ್ಷದ ಗ್ಲಾಕೋಮ ಅರಿವು ಸಪ್ತಾಹದ ಘೋಷ ವಾಕ್ಯ ” ಜಗತ್ತು ಪ್ರಕಾಶಮಾನವಾಗಿದೆ, ನಿಮ್ಮ ದೃಷ್ಟಿಯನ್ನು ಉಳಿಸಿಕೊಳ್ಳಿ” ಎಂಬುದಾಗಿದ್ದು
ಈ ರೋಗವನ್ನು ಸಾಧ್ಯವಾದಷ್ಟು ಬೇಗ ಪತ್ತೆ ಹಚ್ಚಲು ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿ, ಜಾಗೃತವಾಗಿ ನಿಮ್ಮ ದೃಷ್ಟಿಯನ್ನು ಸುರಕ್ಷಿತವಾಗಿರಿಸಲು, ಮತ್ತು ಅಂಧತ್ವವನ್ನು ತಡೆಯಲು ಸಹಕರಿಸಿರೆಂದು ಸಾರ್ವಜನಿಕರಲ್ಲಿ ನಾರಾಯಣ ನೇತ್ರಾಲಯದ ಸಂಸ್ಥಾಪಕ ಅಧ್ಯಕ್ಷರು
ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ।। ಕೆ. ಭುಜಂಗ ಶೆಟ್ಟಿ ಯವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಡಾ।। ನರೇನ್ ಶೆಟ್ಟಿ, ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಜಿ. ಪಿ. ಕ್ಯಾಪ್ಟನ್ ಎಸ್. ಕೆ. ಮಿತ್ತಲ್, ವಿ. ಎಸ್. ಎಮ್, ಮತ್ತು ವೈದ್ಯರುಗಳು ಭಾಗವಹಿಸಿದ್ದರು.