Wednesday, September 24, 2025

Latest Posts

Narendra Modi : ವಿದೇಶಿ ಸಾಲದ ಮಾಹಿತಿ ಮುಚ್ಚಿಟ್ಟಿದ್ಯಾ ಮೋದಿ ಸರ್ಕಾರ?

- Advertisement -

National News : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ವಿದೇಶಿ ಸಾಲ ಕುರಿತು ಸರ್ಕಾರ ಮಾಹಿತಿ ಮುಚ್ಚಿಟ್ಟಿದೆ ಎಂದು ಸಿಎಜಿ ವರದಿ ತಿಳಿಸಿದೆ. ಕೇಂದ್ರವು 2021-2022 ಹಣಕಾಸು ವರ್ಷದಲ್ಲಿ 4.39 ಲಕ್ಷ ಕೋಟಿ ರೂಪಾಯಿಗಳ ವಿದೇಶ ಸಾಲವನ್ನು ತೋರಿಸಿದೆ. ಆದರೆ, ಭಾರತದ ನಿಜವಾದ ಸಾಲವು 6.58 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಸಿಎಜಿ ಹೇಳಿದೆ..

2021-2022ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಆಗಸ್ಟ್‌ನಲ್ಲಿ ಸಿಎಜಿ ವರದಿ ಪ್ರಕಟಿಸಿದೆ. ನರೇಂದ್ರ ಮೋದಿ ಸರ್ಕಾರದ ಪ್ರಮುಖ ಮಾಹಿತಿಯನ್ನು ಮರೆಮಾಚುವ ಕೆಟ್ಟ ಪ್ರವೃತ್ತಿಯನ್ನು ಬೆಳಸಿಕೊಂಡಿದೆ ಎಂದು ಸಿಎಜಿ ಆರೋಪಿಸಿದೆ.

ಬಾಹ್ಯ ಸಾಲ ಎಂದರೇನು?
– ವಿದೇಶಿ ಖಾಸಗಿ ವಾಣಿಜ್ಯ ಬ್ಯಾಂಕುಗಳು, ಸರ್ಕಾರಗಳು ಅಥವಾ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಬಾಹ್ಯ ಸಾಲವೆಂದು ಕರೆಯುತ್ತಾರೆ
– ಈ ಸಾಲಕ್ಕೆ ಬಡ್ಡಿ ಸೇರಿದಂತೆ ವಿದೇಶಿ ಸಂಸ್ಥೆಗಳಿಗೆ ನಗದು ರೂಪ ಅಥವಾ ಸರಕುಗಳ ರಪ್ತು ರೂಪದಲ್ಲಿ ಸರ್ಕಾರ ಪಾವತಿಸಬೇಕಾಗುತ್ತದೆ
– ಇದು ದೇಶದ ನಿವಾಸಿಗಳ ಮೇಲಿನ ಹೊರೆಯಾಗಿದೆ. ಈ ಸಾಲದ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವುದು ಸರ್ಕಾರಗಳ ಕರ್ತವ್ಯ
– ಸಾಲ ಪಡೆದ ದೇಶವು ತನ್ನ ಸಾಲವನ್ನು ವಾಪಸ್ಸು ತೀರಿಸದಿದ್ದರೆ, ಅಂತಹ ದೇಶವನ್ನು ಆರ್ಥಿಕವಾಗಿ ದಿವಾಳಿ ಎದ್ದ ದೇಶ ಎಂದು ಘೋಷಿಸಲಾಗುತ್ತದೆ.
– ಸಾಲ ಪಡೆಯುವ ದೇಶ ಹಾಗೂ ಸಾಲ ನೀಡುವ ದೇಶಗಳ ನಡುವೆ ಒಪ್ಪಂದಗಳು ಏರ್ಪಡುತ್ತವೆ. ಈ ಮೂಲಕ ಸಾಲ ವಿನಿಮಯವಾಗುತ್ತದೆ
– ಈ ಸಾಲವನ್ನು ನೈಸರ್ಗಿಕ ವಿಪತ್ತುಗಳು, ಯುದ್ಧಪೀಡಿತ ದೇಶಗಳ ಅನಿವಾರ್ಯತೆಗಳನ್ನು ನೀಗಿಸಲು ಬಳಸಬಹುದು.

Congress : ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ

‘ಅಬ್ಬಕ್ಕ, ಓಬವ್ವ,ರಾಣಿ ಚೆನ್ನಮ್ಮಂಥವರ ರಾಜ್ಯದಿಂದ ನಾನು ಬಂದಿದ್ದೇನೆ’

Cauvery Meeting : ದೆಹಲಿಯಲ್ಲಿ ಕಾವೇರಿ ಸಭೆ : ಸಭೆಯಲ್ಲಿ ಸಿದ್ದರಾಮಯ್ಯ ಏನಂದ್ರು?

- Advertisement -

Latest Posts

Don't Miss