Doctor-ವೈದ್ಯನಿಂದ ಅತ್ಯಾಚಾರಕ್ಕೆ ಒಳಗಾದ ಯುವತಿ

ಮಹಾರಾಷ್ಟ್ರ: ವೈದ್ಯರನ್ನು ದೇವರೆಂದು ಕಾಣುವ ನಮ್ಮ ದೇಶವಿದು. ಆದರೆ ಅವರಿಂದಲೆ ದುರ್ಘಟನೆಗಳು ನಡೆದರೆ ಯಾರನ್ನು ದೇವರೆಂದು ಕರೆಯೋದು ? ಯಾಕೆಂದರೆ ಇಲ್ಲೊಬ್ಬ ವೈದ್ಯರು ಮಾನಸಿಕ ಅಸ್ವಸ್ತೆಯಾಗಿರುವ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ ಗ್ರಾಮದಲ್ಲಿ ನಡೆದಿದೆ.

ಥಾಣೆ ಜಿಲ್ಲೆಯ ಬದ್ಲಾಪುರ ಪಶ್ಚಿಮ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ಯುವತಿಯೊಬ್ಬಳು ಮನೆಗೆ ದಿನಸಿಗಳನ್ನು ತರಲು ಕಿರಾಣಿ ಅಂಗಡಿಗೆ ಹೋಗಿದ್ದಳು ಆಗ ಪಕ್ಕದ  ಕ್ಲೀನಿಕ್ ನಲ್ಲಿದ್ದ ವೈದ್ಯರು ಆ ಯುವತಿಯನ್ನು ಬಲವಂತವಾಗಿ ಕ್ಲೀನಿಕ್ ನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.

ಯುವತಿ ತುಂಬಾ ಹೊತ್ತಾದರೂ ಮನೆಗೆ ಬರದೆ ಇರುವುದನ್ನು ಗಮನಿಸಿದ ಮನೆಯವರು ಕಿರಾಣಿ ಅಂಗಡಿಗೆ ವಿಚಾರಿಸಲು ಹೋದಾಗ ಅಂಗಡಿ ಪಕ್ಕದಲ್ಲಿದ್ದ ಕ್ಲೀನಿಕ್ ನ ಮುಂದೆ ಯುವತಿಯ ಚಪ್ಪಲಿಗಳು ಇರುವುದನ್ನು ಕಂಡು ಕ್ಲೀನಿಕ್ ಒಳಗೆ ಮನೆಯವರು ಹೋಗಿ ನೋಡಿದಾಗ ವೈದ್ಯನು ಯುವತಿಯನ್ನು ಅತ್ಯಾಚಾರ ಮಾಡುತ್ತಿರುವುದನ್ನು ಕಂಡು ವೈದ್ಯನ್ನು ಮನಬಂದಂತೆ ತಳಿಸಿದ್ದಾರೆ ನಂತರ ಠಾಣಿಗೆ ದೂರನ್ನು ದಾಖಲಿಸಿದ್ದಾರೆ.

ಪೋಲಿಸರು ಅತ್ಯಾಚಾರ ಆರೋಪದಡಿ 376 ಸೆಕ್ಷನ್ ಕಾಯ್ದೆಯಡಿ ಆರೋಪಿಯನ್ನು ಪ್ರಕರಣ ದಾಖಲಿಸಿದ್ದಾರೆ

Police-ಪುಡಿರೌಡಿಗಳಿಂದ ಯುವಕನ ಹತ್ಯೆ

Rashmika Mandanna : ಕಿರಿಕ್ ಬೆಡಗಿಗೆ ಶುರುವಾಯ್ತು ಕನ್ನಡ ಪ್ರೇಮ…?!

D Boss Dharshan : ಡಿ ಬಾಸ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ….!

About The Author