National News: ಕೇತನ್ ಸಾವಿನ ಬಗ್ಗೆ ವ್ಯಂಗ್ಯವಾಡಿದ್ದ ಡೆಂಟಿಸ್ಟ್ 5 ವರ್ಷ ಅಮಾನತು

National News: ಸೀಯಾ ಅಗರ್ವಾಲ್ ಎಂಬಾಕೆ ತನ್ನ ಪ್ರಿಯತಮ ಚೇತನ್ ಜತೆ ಸೇರಿ, ಮದುವೆ ಫಿಕ್ಸ್ ಆಗಿದ್ದ ವರ ಕೇತನ್‌ನನ್ನು ಲೋಹ್‌ಘಡ್ ಫೋರ್ಟ್‌ನಿಂದ ತಳ್ಳಿ ಹತ್ಯೆ ಮಾಡಿದ್ದ ಪ್ರಕರಣದ ಬಗ್ಗೆ ದಂತ ವೈದ್ಯೆ ಅಪಹಾಸ್ಯ ಮಾಡಿದ್ದಳು. ಇದೀಗ ಆಕೆಯನ್ನು 5 ವರ್ಷ ಅಮಾನತು ಮಾಡಲಾಗಿದೆ.

ಡಾ.ಮುಸ್ಕಾನ್ ಸೋನಿ ಎಂಬಾಕೆ ಅಮಾನತಾದ ವೈದ್ಯೆಯಾಗಿದ್ದಾಳೆ. ಅಖಿಲ ಭಾರತ ದಂತ ವೈದ್ಯ ವಿದ್ಯಾರ್ಥಿಗಳ ಮತ್ತು ಶಸ್ತ್ರ ಚಿಕಿತ್ಸಕರ ಸಂಘ ಈ ನಿರ್ಧಾರ ಮಾಡಿದ್ದು, ಡಾ.ಮುಸ್ಕಾನ್‌ನನ್ನು 5 ವರ್ಷ ಅಮಾನತು ಮಾಡಿದೆ.

ಮಧ್ಯಪ್ರದೇಶದ ಎಐಡಿಎಸ್‌ಎ ಸಂಘಟನೆಯ ಖಜಾಂಚಿಯಾಗಿದ್ದ ಮುಸ್ಕಾನ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೋ ಶೇರ್ ಮಾಡಿದ್ದರು. ಅದರಲ್ಲಿ ಕೇತನ್ ಸಾವಿನ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದರು. ಹೀಗಾಗಿ ಮುಸ್ಕಾನ್‌ನನ್ನು 5 ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಆಕೆ ಮಾಡಿದ ಈ ಕೆಲಸಕ್ಕೆ 5 ವರ್ಷಗಳ ಕಾಲ ಆಕೆ ಎಲ್ಲಿಯೂ ಕೆಲಸ ಮಾಡುವಂತಿಲ್ಲ. ಯಾವುದೇ ಕ್ಲಿನಿಕ್ ಓಪನ್ ಮಾಡುವಂತಿಲ್ಲ.

ಇನ್ನು ಹಂತಕಿ ಸೀಯಾ ಮತ್ತು ಆಕೆಯ ಪ್ರಿಯಕರ ಚೇತನ್‌ನನ್ನು ಪೋಲೀಸರು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ. ಸದ್ಯ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

About The Author