Wednesday, March 12, 2025

Latest Posts

National News: ಗಣಿತ ಶಿಕ್ಷಕನಿಗೆ ಕಪಾಳ ಮೋಕ್ಷ ಮಾಡಿದ ಪ್ರಿನ್ಸಿಪಲ್.. ಯಾಕೆ ಗೊತ್ತಾ..?

- Advertisement -

National News: ಶಾಲೆಯಲ್ಲಿ ಮಕ್ಕಳು ಕೆಟ್ಟ ಕೆಲಸ ಮಾಡಿದ್ರೆ, ಕೆಟ್ಟ ಬುದ್ಧಿ ತೋರಿಸಿದರೆ , ಎದುರುತ್ತರ ಕೊಟ್ಟರೆ ಶಿಕ್ಷಕರು ಹೊಡೆಯೋದನ್ನು, ಬೈಯ್ಯೋದನ್ನು ನೀವು ನೋಡಿರುತ್ತೀರಿ. ಆದ್ರೆ, ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಪ್ರಿನ್ಸಿಪಾಲರು, ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗುಜರಾತ್‌ನ ಭರೂಚ್‌ ಜಿಲ್ಲೆಯ ನವಯುಗ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ರಾಜೇಂದ್ರ ಪಾಾರ್ಮರ್ ಪೆಟ್ಟು ತಿಂದ ಶಿಕ್ಷಕರಾಗಿದ್ದಾರೆ. ಇನ್ನು ಗಣಿತ ಶಿಕ್ಷಕರಿಗೆ ಪ್ರಿನ್ಸಿಪಾಾಲರು ಈ ರೀತಿ ಥಳಿಸಲು ಕಾರಣವೇನು ಅಂದ್ರೆ, ಶಿಕ್ಷಕರು ಕ್ಲಾಸಿನಲ್ಲಿ ಅನುಚಿತವಾಗಿ ವರ್ತಿಸಿದ್ದಾರಂತೆ. ಹಾಗಾಗಿ ಪ್ರಿನ್ಸಿಪಾಲರು ಶಿಕ್ಷಕರಿಗೆ ಹೊಡೆದಿದ್ದಾರೆ.

ವಿಷಯದ ಬಗ್ಗೆ ಮಾತನಾಡಲು ಪ್ರಿನ್ಸಿಪಾಲರು ಶಿಕ್ಷಕರನ್ನು ತಮ್ಮ ಕ್ಯಾಬಿನ್‌ಗೆ ಕರೆಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ರೊಚ್ಚಿಗೆದ್ದ ಪ್ರಿನ್ಸಿಪಾಲರು ಎದ್ದು ಬಂದು, ಶಿಕ್ಷಕರನ್ನು ನೆಲಕ್ಕೆ ಬೀಳಿಸಿ, 25 ಸೆಕೆಂಡಿನಲ್ಲಿ 10ಕ್ಕೂ ಹೆಚ್ಚು ಬಾರಿ ಕಪಾಳಕ್ಕೆ ಬಾರಿಸಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss