Monday, April 14, 2025

Latest Posts

National News: ಪೋಸ್ಟ್ ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ

- Advertisement -

National News: ನಾವು ಕೆಲ ದಿನಗಳ ಹಿಂದಷ್ಟೇ ಎರಡು ಸಾವಿನ ಬಗ್ಗೆ ಸುದ್ದಿ ನೀಡಿದ್ದೆವು. ಓರ್ವ ವ್ಯಕ್ತಿ ಕುಟುಂಬದೊಂದಿಗೆ ರೆಸ್ಟೋರೆಂಟ್‌ಗೆ ಹೋಗಿ, ಊಟ ಆರ್ಡರ್ ಮಾಡಿ, ಇನ್ನೇನು ಊಟ ಮಾಡಬೇಕು ಅನ್ನುವಾಗಲೇ, ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದರು. ಅದು ಯಾರೂ ಊಹಿಸದೇ, ಅಚಾನಕ್ ಆಗಿ ಆದ ಸಾವಾಗಿತ್ತು.

ಇನ್ನು ಓರ್ವ ಯುವತಿ ಸಾಯಲೇಬೇಕು ಎಂದು ರೈಲ್ವೆ ಹಳಿಯ ಮೇಲೆ ಮಲಗಿ, ನಿದ್ರೆಗೆ ಜಾರಿದ್ದಳು. ಲೋಕೋ ಪೈಲಟ್‌ ನೋಡಿದ ಕಾರಣ, ಆಕೆಯ ಜೀವ ಉಳಿಯಿತು. ಈ ಸುದ್ದಿಯಲ್ಲಿ ಆಕೆ ಸಾಯಬೇಕು ಎಂದು ಬಯಸಿದ್ದರೂ, ಆಕೆಯ ಜೀವನ ಇನ್ನು ಸಾಗಬೇಕು ಎಂದು ಆ ದೇವರು ಬರೆದಿದ್ದನೇನೋ.. ಹಾಗಾಗಿ ಆಕೆ ಉಳಿದುಕೊಂಡಳು.

ಇದೀಗ ಬಿಹಾರದಲ್ಲಿ ಇಂಥದ್ದೇ ಇನ್ನೊಂದು ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಸತ್ತನೆಂದು ಆತನ ಶವದ ಪೋಸ್ಟ್ ಮಾರ್ಟಮ್ ಮಾಡಬೇಕು ಎಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ಎದ್ದು ಕುಳಿತ ವ್ಯಕ್ತಿ ನಾನು ಸತ್ತಿಲ್ಲ ಬದುಕಿದ್ದೇನೆ ಎಂದಿದ್ದಾರೆ.

ಆಸ್ಪತ್ರೆಗೆ ಬಂದಾಗ ರಾಕೇಶ್ ಕುಮಾರ್ ಎಂಬ ವ್ಯಕ್ತಿ ನೆಲದ ಮೇಲೆ ಕುಸಿದು ಬಿದ್ದಿದ್ದ. ಚಲನವಲನವಿಲ್ಲದ ಕಾರಣ, ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ತಿಳಿದಿದ್ದಾರೆ. ಅಲ್ಲೇ ಇದ್ದ ವೈದ್ಯರು ನಾಡಿಮಿಡಿತ ಚೆಕ್ ಮಾಡದೇ, ಈತ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ. ಹಾಗಾಗಿ ಪೋಸ್ಟ್ ಮಾರ್ಟಮ್‌ಗಾಗಿ ಕರೆದೊಯ್ಯಲಾಗಿತ್ತು. ಆದರೆ ಪೋಸ್ಟ್ ಮಾರ್ಟಮ್ ಮೇಲೆ ವ್ಯಕ್ತಿ ಎದ್ದು ಸ್ಟೆಚರ್ ಮೇಲೆ ಕುಳಿತಿದ್ದಾನೆ. ಈ ದೃಶ್ಯ ಕಂಡು ಅಲ್ಲೇ ಇದ್ದ ಜನರು ದಂಗಾಗಿದ್ದಾರೆ.

ಇನ್ನು ಯಾಕೆ ಆ ರೀತಿ ರಾಕೇಶ್ ನೆಲದ ಮೇಲೆ ಕುಸಿದು ಬಿದ್ದಿದ್ದರು ಎಂದರೆ, ರಾಕೇಶ್ ಏನು ಸೇವಿಸಿರಲಿಲ್ಲ. ಹಾಗಾಗಿ ತಲೆಸುತ್ತು ಬಂದು ಬಿದ್ದಿದ್ದನೆಂದು ಆತನೇ ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುವ ಹಂತಕ್ಕೆ ಪ್ರಕರಣ ಹೋಗಿದೆ. ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

- Advertisement -

Latest Posts

Don't Miss