ಬೆಂಗಳೂರು, ಜು.17: ಹಲವು ನದಿಗಳ ಮೂಲ ಮತ್ತು ನೂರಾರು ಅಪರೂಪದ ಪ್ರಭೇದಗಳ ನೆಲೆಯಾಗಿರುವ ಪಶ್ಚಿಮ ಘಟ್ಟದ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.ಅಮೂಲ್ಯ ಸಸ್ಯ, ಪ್ರಾಣಿ ಸಂಕುಲ ರಕ್ಷಣೆಗೆ ಸರ್ಕಾರ ಬದ್ಧ : ಈಶ್ವರ ಖಂಡ್ರೆ
ಪಶ್ಚಿಮ ಘಟ್ಟ ಸಂರಕ್ಷಣೆ: ಸಂಜಯ್ ಕುಮಾರ್ ನೇತೃತ್ವದ ನಿಯೋಗದಿಂದ ಅರಣ್ಯ ಸಚಿವರ ಭೇಟಿ
ತಮ್ಮ ಕಚೇರಿಯಲ್ಲಿಂದು ನಿವೃತ್ತ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದ ಪಶ್ಚಿಮ ಘಟ್ಟಗಳ ಕುರಿತ ತಜ್ಞರ ಸಮಿತಿಯ ನಿಯೋಗದೊಂದಿಗೆ ಸಮಾಲೋಚಿಸಿದ ಸಚಿವರು, ಅರಣ್ಯಗಳ ಸಂರಕ್ಷಣೆಗೆ ಮತ್ತು ಪರಿಸರ ಉಳಿಸಲು ಸರ್ಕಾರ ಬದ್ಧವಾಗಿದೆ. ಅದೇ ವೇಳೆ ಸುಸ್ಥಿರ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೂ ಆದ್ಯತೆ ನೀಡಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಬಹು ಹಿಂದಿನಿಂದಲೂ ನಮ್ಮ ಪೂರ್ವಜರು ಅರಣ್ಯ, ಬೆಟ್ಟಗುಡ್ಡ, ನದಿಮೂಲ, ಜಲಾನಯನ ಪ್ರದೇಶವನ್ನು ಸಂರಕ್ಷಿಸಿದ್ದಾರೆ. ಪರಿಸರ ಕಾಳಜಿಯಿದ್ದ ದಿವಂಗತ ಪ್ರಧಾನಿ ಇಂದಿರಾ ಗಾಂಧೀ ಅವರು ಅರಣ್ಯ ಸಂರಕ್ಷಣೆ, ವನ್ಯಮೃಗಗಳ ಸಂರಕ್ಷಣೆ, ವೃಕ್ಷ ಸಂರಕ್ಷಣೆಗೆ ಒತ್ತು ನೀಡಿ ಅರಣ್ಯ ಸಂರಕ್ಷಣಾ ಕಾಯಿದೆ, ವನ್ಯಜೀವಿ ಸಂರಕ್ಷಣಾ ಕಾಯಿದೆಗಳನ್ನು ತಂದು ಮಾದರಿಯಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಸಹ ಸಸ್ಯಸಂಕುಲ, ಪ್ರಾಣಿಸಂಕುಲದ ಸಂರಕ್ಷಣೆಗೆ ಕಟಿಬದ್ಧವಾಗಿದೆ ಎಂದರು.
ಸಂಜಯ್ ಕುಮಾರ್ ಮಾತನಾಡಿ, ಪಶ್ಚಿಮಘಟ್ಟದ ವೈಶಿಷ್ಟ್ಯತೆಗಳನ್ನು ವಿವರಿಸಿ, ದೇಶದ ನಾನಾ ಭಾಗಗಳ ಹವಾಮಾನ, ಮೀನುಗಾರಿಕೆಯ ಮೇಲೆ ಪಶ್ಚಿಮ ಘಟ್ಟದ ಪ್ರಭಾವದ ವಿವರ ನೀಡಿದರು.
ನಿಯೋಗದಲ್ಲಿ ಭಾರತೀಯ ವಿಜ್ಞಾನ ಮಂದಿರದ ಸುಕುಮಾರ್, ಕೇಂದ್ರ ಅರಣ್ಯ, ಜೀವಿಶಾಸ್ತ್ರ, ಹವಾಮಾನ ವೈಪರೀತ್ಯ ಸಚಿವಾಲಯದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಖನ್ನಾ, ವಿಜ್ಞಾನಿಗಳಾದ ರಿತೇಶ್ ಜೋಶಿ, ಸುರೇಶ್ ಕುಮಾರ್ ಮತ್ತು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಪ್ರಕಾಶ್ ಇದ್ದರು.
Showcauses letter: ನೀವೇಕೆ ತಡವಾಗಿ ಬಂದಿದ್ದೀರಾ ? ಎಂದು ಹಿರಿಯ ಅಧಿಕಾರಿಗೆ ಪ್ರಶ್ನೆ ಮಾಡಿದ ಕಿರಿಯ ಅಧಿಕಾರಿ
Narendra Modi : ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ಗೌರವ ಪ್ರಶಸ್ತಿ