Saturday, February 15, 2025

Latest Posts

Narendra Modi : ಪ್ರಧಾನಿ ಮೋದಿಗೆ ದುಬೈನಲ್ಲಿ ಸಸ್ಯಹಾರ ಭೋಜನ

- Advertisement -

Dubai News: ಒಂದು ದಿನದ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು  ಯುಎಇಗೆ ಹೋಗಿದ್ದು , ಅವರಿಗೆ ಅಲ್ಲಿ ಅದ್ದೂರಿ ಉಪಚಾರ ದೊರೆಯಿತು.

ಔತಣಕೂಟದಲ್ಲಿ ಸಸ್ಯಾಹಾರವನ್ನೇ ಬಡಿಸಲಾಗಿದೆ. ಔತಣಕೂಟದ ಮೆನು ಕಾರ್ಡ್‌ನಲ್ಲಿ ಎಲ್ಲಾ ಊಟಗಳು ಸಸ್ಯಾಹಾರಿ ಮತ್ತು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಿದ್ದು. ಯಾವುದೇ ಡೈರಿ ಅಥವಾ ಮೊಟ್ಟೆಯ ಉತ್ಪನ್ನಗಳನ್ನು ಹೊಂದಿರುವುದಿಲ್ಲ ಎಂದು ಬರೆಯಲಾಗಿತ್ತು.

ಅಧ್ಯಕ್ಷರ ಅರಮನೆ  ಕಸ್ರ್-ಅಲ್-ವತನ್ ನಲ್ಲಿ ನಡೆದ ಔತಣಕೂಟದಲ್ಲಿ ಮೊದಲಿಗೆ ಗೋಧಿ ಮತ್ತು ಖರ್ಜೂರದ ಜತೆ ಸ್ಥಳೀಯ ಸಾವಯವ ತರಕಾರಿಗಳ ಸಲಾಡ್ ಬಡಿಸಲಾಗಿದೆ. ನಂತರ ಮಸಾಲಾ ಸಾಸ್‌ನೊಂದಿಗೆ ಗ್ರಿಲ್ಡ್ ತರಕಾರಿಗಳನ್ನು ನೀಡಲಾಯಿತು. ಇದಾದ ಮೇಲೆ  ಹೂಕೋಸು ಮತ್ತು ಕ್ಯಾರೆಟ್ ತಂದೂರಿಯೊಂದಿಗೆ ಕಪ್ಪು ಉದ್ದಿನ ಬೇಳೆ ಮತ್ತು ಸ್ಥಳೀಯ ಗೋಧಿಯಿಂದ ಮಾಡಿದ ಭಕ್ಷ್ಯ ನೀಡಲಾಗಿದೆ. ಸಿಹಿತಿಂಡಿಗಳಿಗಾಗಿ ವಿವಿಧ ಹಣ್ಣುಗಳನ್ನು ನೀಡಲಾಗಿದೆ.

Dubai : ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದ ತ್ರಿವರ್ಣಧ್ವಜ, ನಮೋ…!

Narendra Modi: ಫ್ರಾನ್ಸ್ ಅಧ್ಯಕ್ಷರಿಗೆ ಮೋದಿ ನೀಡಿದ ಉಡುಗೊರೆ ಏನು ಗೊತ್ತಾ..?!

Narendra modi : ಅಬುದಾಬಿಯಲ್ಲಿ ಪ್ರಧಾನಿ ಮೋದಿ…!

- Advertisement -

Latest Posts

Don't Miss