Navaratri Special: ನವರಾತ್ರಿಯ 6ನೇ ದಿನ ಪೂಜಿಸಲ್ಪಡುವ ಕಾತ್ಯಾಯಿನಿ ದೇವಿಯ ಹಿನ್ನೆಲೆ

Navaratri Special: ಇಂದು ನವರಾತ್ರಿಯ 6ನೇ ದಿನವಾಗಿದ್ದು, ಇಂದು ದುರ್ಗೆಯ ರೂಪವಾದ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದರೆ ಪಾರ್ವತಿ ದೇವಿ ಏಕೆ ಕಾತ್ಯಾಯಿನಿಯ ರೂಪ ತಾಳಿದಳು..? ಯಾರೀ ಮಹಾಮಾಯಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಪಾರ್ವತಿ ದೇವಿ ಕಾತ್ಯಾಯನ ಋಷಿಗೆ ಜನಿಸಿದ ಕಾರಣ, ಆಕೆಯನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ಸಿಂಹವಾಹಿನಿಯಾಗಿರುವ ಕಾತ್ಯಾಯಿನಿ, ಒಂದು ಕೈಯಲ್ಲಿ ಖಡ್ಗ, ಕಮಲವನ್ನು ಹಿಡಿದು, ಇನ್ನೊಂದು ಕೈಯಲ್ಲಿ ಆಶೀರ್ವದಿಸುತ್ತಾಳೆ. ಪುರಾಣ ಕಥೆಗಳ ಪ್ರಕಾರ, ಕಾತ್ಯಾಯಿನಿ ಮಹಿಷಾಸುರನ ಸಂಹಾರ ಮಾಡಿದಳು ಎನ್ನಲಾಗಿದೆ. ಹಾಗಾಗಿ ಈಕೆಯನ್ನು ಮಹಿಷಾಸುರಮರ್ದಿನಿ ಎಂದು ಕೂಡ ಕರೆಯಲಾಗುತ್ತದೆ.

ಕಾಾತ್ಯಾಯಿನಿ ಜನನದ ಮುನ್ನ ಲೋಕದಲ್ಲಿ ಮಹಿಷಾಸುರನ ಹಾವಳಿ ಜೋರಾಗಿತ್ತು. ಈತನ ಸಂಹಾರಕ್ಕಾಗಿ ಸ್ವಯಂ ದೇವಿಯೇ ಬರಬೇಕು ಎಂದು ಕಾತ್ಯಾಯನ ಋಷಿಗಳು, ದೇವಿಗಾಗಿ ಪ್ರಾರ್ಥನೆ ಮಾಡಿದರು. ಹಲವು ವರ್ಷಗಳ ತಪಸ್ಸಿನ ಬಳಿಕ, ದೇವಿ ಕಾತ್ಯಾಯನ ಋಷಿಗಳ ಕುಟೀರದಲ್ಲಿ ಜನ್ಮತಾಳಿದಳು. ಮಹಿಷಾಸುರನ ವಧೆ ಮಾಡಿದಳು.

ಶುಂಭ ನಿಶುಂಭ ರಾಕ್ಷಸರು ಸ್ವರ್ಗಲೋಕದ ಮೇಲೆ ದಾಳಿ ಮಾಡಿ, ದೇವತೆಗಳನ್ನು, ಗ್ರಹಗಳನ್ನು ತಮ್ಮ ಸೆರೆಯಲ್ಲಿಟ್ಟುಕೊಂಡು, ಸ್ವರ್ಗಲೋಕವನ್ನು ವಶಕ್ಕೆ ಪಡೆದರು. ದೇವತೆಗಳನ್ನು ರಕ್ಷಿಸಲು, ನವಗ್ರಹಗಳನ್ನು ಬಿಡಿಸಲು, ಕಾತ್ಯಾಯಿನಿ ದೇವಿ, ಶುಂಭ ನಿಶುಂಭರೊಂದಿಗೆ ಯುದ್ಧ ಮಾಡಿ, ದೇವತೆಗಳು ಮತ್ತು ನವಗ್ರಹಗಳನ್ನು ರಾಕ್ಷಸರ ಸೆರೆಯಿಂದ ಮುಕ್ತಿಗೊಳಿಸಿದಳು. ಕಾತ್ಯಾಯಿನಿ ದೇವಿಯು ಗುರುಗ್ರಹವನ್ನು ಆಳುತ್ತಿದ್ದು, ಗುರುಬಲ ಚೆನ್ನಾಗಿರಬೇಕು ಎಂದಲ್ಲಿ, ನೀವು ಕಾತ್ಯಾಯಿನಿ ದೇವಿಯನ್ನು ಆರಾಧಿಸಬೇಕು.

About The Author