Navaratri Special: ಪಾರ್ವತಿಯ 7ನೇ ರೂಪವಾದ ಕಾಳರಾತ್ರಿಯನ್ನು ಇಂದು ನಾವು ಪೂಜಿಸುತ್ತೇವೆ. ಕಾಳಿ ದೇವಿಯನ್ನೇ ಕಾಳರಾತ್ರಿ ಎಂದು ಕರೆಯಲಾಗುತ್ತದೆ. ಕಪ್ಪು ಬಣ್ಣದ ದೇಹ, ಹೊರಚಾಚಿದ ನಾಲಿಗೆ, ಘೋರವಾದ ಕಣ್ಣುಗಳು, ಕುತ್ತಿಗೆಗೆ ರುಂಡಮಾಲೆ, ಕೈಯಲ್ಲಿ ಕತ್ತಿ, ದಡ್ಡವಾದ ಉದ್ದ ಕೂದಲಿರುವ ಕಾಳಿ ದೇವಿ, ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ.
ಶುಂಭ ನಿಶುಂಭರ ಸಂಹಾರಕ್ಕಾಗಿ ದೇವಿ ಕಾಳರಾಾತ್ರಿಯ ರೂಪ ತಾಳಿದಳು ಎಂದು ಹೇಳಲಾಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಕಾಳಿ ದೇವಿಯ ಆರಾಧನೆ ಮಾಡಲಾಗುತ್ತದೆ. ಕಾಳಿ ದೇವಿಯ ಆರಾಧಕರಾಗುವುದು ಅಷ್ಟು ಸುಲಭದ ಮಾತಲ್ಲ. ಆಕೆಯ ಕೃಪೆ ಪಡೆಯಬೇಕು ಎಂದರೆ, ಎಲ್ಲ ಸಂಬಂಧ, ಮೋಹಗಳನ್ನು ದೂರ ಮಾಡಬೇಕಾಗುತ್ತದೆ.
ಕಾಳಿ ದೇವಿಯನ್ನು ತುಂಬೆ ಹೂವಿನಿಂದ ಪೂಜಿಸಲಾಗುತ್ತದೆ. ಖರ್ಜೂರ ಅಥವಾ ಜೇನುತುಪ್ಪದಿಂದ ಮಾಡಿದ ಖಾದ್ಯವನ್ನು ಕಾಳಿದೇವಿಗೆ ಅರ್ಪಿಸಲಾಗುತ್ತದೆ. ಶತ್ರು ಸಂಹಾರಕ್ಕಾಗಿ ಕಾಳಿದೇವಿಯನ್ನೇ ಆರಾಧಿಸಲಾಗುತ್ತದೆ. ಶತ್ರು ಸಂಹಾರ ಯಾಗ, ಶತ್ರುಭೈರವಿ ಯಾಗವನ್ನು ಮಾಡುವಾಗ, ಕಾಳಿ ದೇವಿಗೆ ಪೂಜಿಸಬೇಕಾಗುತ್ತದೆ.