Navaratri Special: ನವರಾತ್ರಿಯ 8ನೇ ದಿನದಂದು ದುರ್ಗೆಯ ರೂಪವಾದ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ನವದುರ್ಗೆಯರೆಲ್ಲ ಪಾರ್ವತಿಯ ಅವತಾರವೇ ಆಗಿದ್ದು, ಅಷ್ಟಮಿ ದಿನ ಈಕೆಯನ್ನು ಪ್ರಧಾನ ದೇವಿ ಎಂದು ಪೂಜಿಸಲಾಗುತ್ತದೆ.
ಗೂಳಿಯ ಮೇಲೆ ಕೂತು ಸಂಚರಿಸುವ ಮಹಾಗೌರಿ, ಬಿಳಿ ಬಣ್ಣದ ಸೀರೆಯಲ್ಲಿ ಸಿಂಗಾರಗೊಂಡಿರುತ್ತಾಳೆ. ಪಾರ್ವತಿ ಶಿವನ ಪತ್ನಿಯಾದ ದಾಕ್ಷಾಯಣಿಯ ರೂಪದಲ್ಲಿರುವಾಗ, ದಕ್ಷ ನಡೆಸಿದ ಯಜ್ಞದ ಯಜ್ಞಕುಂಡಕ್ಕೆ ಹಾರಿ, ಪ್ರಾಣತ್ಯಾಗ ಮಾಡಿ ಸತಿ ಎನ್ನಿಸಿಕೊಳ್ಳುತ್ತಾಳೆ. ಬಳಿಕ ಆಕೆಯನ್ನು ಎತ್ತಿಕೊಂಡು ಶಿವ ರುದ್ರತಾಂಡವವಾಡುವಾಗ, ವಿಷ್ಣು ತನ್ನ ಚಕ್‌ರದಿಂದ ಆಕೆಯ ದೇಹವನ್ನು 18 ಭಾಗಗಳಾಗಿ ಮಾಡುತ್ತಾನೆ.
ಆ ಭಾಗಗಳೆಲ್ಲ ಧರೆಗಿಳಿದು ಒಂದೊಂದು ದಿಕ್ಕಿಗೆ ಚದುರಿ 18 ಶಕ್ತಿ ಪೀಠಗಳಾಗಿ ಮಾರ್ಪಾಡಾಗುತ್ತದೆ. ಬಳಿಕ ಸತಿ ಮುಂದಿನ ಜನ್ಮದಲ್ಲಿ ತಪಸ್ಸು ಮಾಡುವ ಮೂಲಕ, ಶಿವನನ್ನು ಒಲಿಸಿಕೊಳ್ಳುತ್ತಾಳೆ. ಅದೇ ಮಹಾಗೌರಿಯ ರೂಪ. ಮಹಾಗೌರಿಗೆ ತೆಂಗಿನಕಾಯಿಯಿಂದ ಮಾಡಿದ ಸಿಹಿ ಖಾದ್ಯವನ್ನು ನೈವೇದ್ಯ ಮಾಡಲಾಗುತ್ತದೆ.
ಜೀವನದಲ್ಲಿ ಯಶಸ್ಸು ಸಿಗಬೇಕು, ದುಃಖ ಶಮನವಾಗಿ, ನೆಮ್ಮದಿಯ ಜೀವನ ಬೇಕೆಂದಲ್ಲಿ, ಮಹಾಗೌರಿಯ ಪೂಜೆ ಮಾಡಬೇಕು. ಅವಿವಾಹಿತರು ದೇವಿಯ ಪೂಜೆ ಮಾಡಿದ್ದಲ್ಲಿ, ಬೇಗ ವಿವಾಹ ಭಾಗ್ಯ ಸಿಗುತ್ತದೆ. ವಿವಾಹಿತರು ಮಹಾಗೌರಿಯನ್ನು ಪೂಜಿಸಿದ್ದಲ್ಲಿ, ಧೀರ್ಘ ಸುಮಂಗಲಿ ಭಾಗ್ಯ ಸಿಗುತ್ತದೆ.