ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದಿಂದ ಇಡೀ ಸ್ಯಾಂಡಲ್‌ವುಡ್ ಕಂಗಾಲಾಗಿದೆ. ಎಲ್ಲಾ ಚಿತ್ರತಾರೆಯರು ಅಪ್ಪು ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಲ್ಲಿ ಧಿಮಾಕು ಸಿನಿಮಾ ದಿಂದ ಹೆಸರುಮಾಡಿದ್ದ,ಹಿರಿಯ ನಟ ಶ್ರೀನಿವಾಸ್ ಮೂರ್ತಿಯವರ ಪುತ್ರ ನವೀನ್ ಕೃಷ್ಣ ಪದ್ಯವನ್ನು ಹಾಡುವ ಮೂಲಕ ಪುನೀತ್‌ಗೆ ನಮನ ಸಲ್ಲಿಸಿದ್ದಾರೆ. ಚಿತ್ರರಂಗದವರೆ ಆಗಲಿ ಅಥವ ಬೇರೆ ಯಾರೆ ಇರಲಿ ಅವರನ್ನು ಸದಾ ಪ್ರೀತಿಯಿಂದಲೆ ಸಂವಹನ ಮಾಡುತ್ತಿದ್ದರು ಪವರ್ ಸ್ಟಾರ್. ಸಿನಿಮಾ ಮಾತ್ರವಲ್ಲದೆ, ಹಲವು ಧಾರವಾಯಿಗಳನ್ನು ನಿರ್ದೇಶಿಸಿ, ನಟಿಸುತ್ತಿದ್ದ ನವೀನ್ ಕೃಷ್ಣ ಅವರ ಪುನೀತ್ ಜೊತೆಗಿನ ಭಾಂದವ್ಯ ಮೊದಲಿಂದಲು ಚೆನ್ನಾಗಿತ್ತು. ಈಗ ಅಪ್ಪು ನಿಧನದ ಕಾರಣ ಅವರಿಗೆ ಕೆಲಸಾಲುಗಳ ಮೂಲಕ ನಮನ ಸಲ್ಲಿಸಿದ್ದಾರೆ.
ಮೊದಲು ಮಾತನಾಡಿರುವ ನವೀನ್ ಕೃಷ್ಣ, “ಇಂತ ಒಂದು ದಿನ, ಇಂತ ಒಂದು ನಮನ ನಾವು ಸಲ್ಲುಸ್ತಿವಿ ಅಂತ ಕನಸು ಮನಸಿನಲ್ಲಿ ಎಣಿಸಿರಲಿಲ್ಲ, ಆದರೆ ಅದೆ ವಾಸ್ತವ. ಪುನೀತ್ ಸರ್ ನೀವು ಇಲ್ಲಾ ಅನ್ನೋದು ವಾಸ್ತವ, ಆದರೆ ನೀವು ಇಲ್ಲೇ ಅನ್ನೋದು ಸತ್ಯ. ನಿಮಗೋಸ್ಕರ ರಮೇಶ್ ಕಪೂರ್ ಅಂತ ಕವಿಗಳು ಒಂದು ಪದ್ಯವನ್ನು ಬರೆದು ಕಳುಹಿಸಿದ್ದಾರೆ, ಹಾಡಿ ಅಂತ ಕೇಳಿದ್ದಾರೆ. ನಾನು ವಾಸ್ತವವಾಗಿ ನಾನೆ ಬರೆದಂತ,ನೀವು ನನಗೆ ಅವಕಾಶ ಮಾಡಿಕೊಟ್ಟಂತ ಲಾಲಿ ಧಾರವಾಯಿಯ ಹಾಡನ್ನು ಹಾಡಿ ನಮನ ಸಲ್ಲಿಸಬೇಕು ಅಂತ ಇದ್ದೆ, ಆದರೆ ಅವರು ಕಳಿಸಿದಂತ ಸಾಹಿತ್ಯ ತುಂಬ ಪ್ರಸ್ತುತ ಅನ್ನುಸ್ತು, ಅದುಕ್ಕೋಸ್ಕರ ಈ ಒಂದು ಹಾಡಿನ ಪ್ರಯತ್ನ” ಎಂದು ದೀಪವೋಂದು ಹಾರಿತು ಚಂದನವನದಿ ಎಂಬ ಪದ್ಯವನ್ನು ಹಾಡಿ, ಪುನೀತ್ ಗೆ ನಮನ ಸಲ್ಲಿಸಿದ್ದಾರೆ ನವೀನ್ ಕೃಷ್ಣ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.