Wednesday, July 2, 2025

Latest Posts

‘ಅನ್ಯ ಭಾಷೆಗಳ ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ಆರಂಭಿಸಬೇಕಾಗುತ್ತದೆ.. ಎಚ್ಚರ’

- Advertisement -

Hubballi News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ಅಂಗಡಿ ಮುಂಗಟ್ಟೆಗಳಲ್ಲಿ ಅಳವಡಿಸಿರುವ ಅನ್ಯಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ನಾಮಫಲಕ ಅಳವಡಿಸಬೇಕು. ಇಲ್ಲದೇ ಹೋದಲ್ಲಿ ಅನ್ಯ ಭಾಷೆಗಳ ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರವೇ ಹುಬ್ಬಳ್ಳಿ ನಗರ ಅಧ್ಯಕ್ಷ ಸಂಜಯ ಪಟದಾರಿ, ವಾಣಿಜ್ಯ ನಗರಿ ಎಂದೇ ಕರೆಸಿಕೊಳ್ಳುವ ಹುಬ್ಬಳ್ಳಿ ಪ್ರಮುಖ ಶೈಕ್ಷಣಿಕ ಮತ್ತು ವ್ಯಾಪಾರಿ ಕೇಂದ್ರವಾಗಿದೆ. ಇಲ್ಲಿ ಅನೇಕ ಅಂಗಡಿ ಮತ್ತು ಮುಂಗಟ್ಟೆಗಳ ನಾಮಫಲಕಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಿ, ಅನ್ಯಭಾಷೆ ನಾಮಫಲಕ ಅಳವಡಿಸಿದ್ದರಿಂದ ಕನ್ನಡಾಭಿಮಾನಿಗಳಿಗೆ ನೋವುಂಟು ಮಾಡಿದೆ. ನಾಮಫಲಕದಲ್ಲಿ ಶೇ.70ರಷ್ಟು ಕನ್ನಡ ಭಾಷೆ ಬಳಸಬೇಕೆಂಬ ನಿಯಮವಿದ್ದರೂ ವಿವಿಧ ಅಂಗಡಿಗಳ ಮಾಲೀಕರು ಇದನ್ನು ಪಾಲಿಸುತ್ತಿಲ್ಲ. ಇವರಿಗೆ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡುವಂತೆ ಅನೇಕ ಸಲ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವ್ಯಾಪಾರ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡೇತರ ಭಾಷೆ ಬಳಸುವಾಗ, ಮೊದಲು ಕನ್ನಡ ನಂತರ ಇತರ ಭಾಷೆಗಳಲ್ಲಿ ನಾಮಫಲಕ ಹಾಕುವುದು ಕಡ್ಡಾಯ. ಇಲ್ಲದಿದ್ದರೆ ಪಾಲಿಕೆ ವ್ಯಾಪಾರ-ವಾಣಿಜ್ಯ ಮಳಿಗೆಗಳ ಸನ್ನದು ರದ್ದುಗೊಳಿಸುವುದು ಇಲ್ಲವೇ ನವೀಕರಿಸಬಾರದು ಎಂಬ ನಿಯಮವಿದೆ. ಆದರೆ ಅದು ಯಾವುದು ಜಾರಿಯಾಗುತ್ತಿಲ್ಲ. ಇದರಿಂದಾಗಿ ನಾಮಫಲಕಗಳಲ್ಲಿ ಅನ್ಯ ಭಾಷೆಗಳು ರಾರಾಜಿಸುತ್ತಿವೆ. ಇದು ಕನ್ನಡಾಭಿಮಾನಿಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕನ್ನಡಪರ, ಜನಪರ ಸಂಘಟನೆಗಳ ಸಹಯೋಗದಲ್ಲಿ ಅನ್ಯ ಭಾಷೆಗಳ ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ನಡೆಸಲಾಗುವುದು ಜತೆಗೆ ಪಾಲಿಕೆ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸಚಿನ ಗಾಣಿಗೇರ, ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ಅಮರಾವತಿ, ಗೌರವ ಅಧ್ಯಕ್ಷ ಕುಮಾರ ಪಾಟೀಲ್ ಸೇರಿದಂತೆ ಮುಂತಾದವರು ಇದ್ದರು.

ಹುಬ್ಬಳ್ಳಿಯ ಬಾಷಾಪೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಯತ್ನಾಳ ಹಠಾವೋ ಆರಂಭಿಸುತ್ತೇವೆ: ಬಿಜೆಪಿ ವಕ್ತಾರರಿಂದ ಎಚ್ಚರಿಕೆ

ಠಾಣೆಯ ಆವರಣದಲ್ಲಿಯೇ ತಾಳಿ ಕಟ್ಟಿದ ಯುವಕ: ಜೈ ಶ್ರೀರಾಮ್ ಘೋಷಣೆ

- Advertisement -

Latest Posts

Don't Miss