Thursday, October 23, 2025

Latest Posts

ನೀರಜ್ ಚೋಪ್ರಾಗೆ ಮೊದಲ ಸ್ಥಾನ

- Advertisement -

ಲಾಸನ್: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಲಾಸನ್‍ನಲ್ಲಿ ನಡೆದ  ಡೈಮಂಡ್ ಲೀಗ್‍ನಲ್ಲಿ ಮೊದಲ ಸ್ಥಾನ ಪಡೆದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾದರು.

ಗಾಯದಿಂದಾಗಿ ಕಾಮನ್‍ವೆಲ್ತ್ ಕ್ರೀಡಾಕೂಟದಿಂದ ದೂರ ಉಳಿದಿದ್ದ ನೀರಜ್ ಚೋಪ್ರಾ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 89.04 ಮೀ.ದೂರ ಎಸೆದು ಮೊದಲ ಸ್ಥಾನ ಪಡೆದರು. ಇದು ನೀರಜ್ ಅವರ ವೃತ್ತಿ ಜೀವನದ ಮೂರನೆ ಅತ್ಯುತ್ತಮ ಪ್ರಯತ್ನವಾಗಿದೆ. ಎರಡನೆ ಎಸೆತ 85.18 ಮೀ. ಆಗಿದೆ.

ಸೆ.7 ಮತ್ತುಸೆ.8ರಂದು ಜೂರಿಚ್‍ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‍ಗೆ ಆಯ್ಕೆಯಾಗಿದ್ದಾರೆ.

ಡೈಮಂಡ್ ಲೀಗ್ ಕೂಟದಲ್ಲಿ ನೀರಜ್‍ಗೂ ಮುನ್ನ ಡಿಸ್ಕಸ್ ಥ್ರೊ ಅಥ್ಲೀಟ್ ವಿಕಾಸ್ ಗೌಡ ಅಗ್ರಮೂರರಲ್ಲಿ ಸ್ಥಾನ ಪಡೆದಿದ್ದರು.

 

 

 

- Advertisement -

Latest Posts

Don't Miss