Friday, April 18, 2025

Latest Posts

ನೇಹಾಳನ್ನು ಮತಾಂತರ ಮಾಡುವ ಪ್ರಯತ್ನ ನಡೆದಿತ್ತು ಅಂತಾ ಆಕೆಯ ತಂದೆಯೇ ಹೇಳಿದ್ದಾರೆ: ಪ್ರಹ್ಲಾದ್ ಜೋಶಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದ್ದು, ನೇಹಾ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ಸಿಎಂ, ಗೃಹ ಮಂತ್ರಿ ಕ್ಯಾಜುವಲ್ ಆಗಿ ಮಾತನಾಡಿದ್ದಾರೆ. ಯಾವುದೇ ಜವಾಬ್ದಾರಿ ತೆಗೆದುಕೊಳ್ಳದ ಹೇಳಿಕೆ ನೀಡಿದ್ದಾರೆ. ಈ ಮೂಲಕ ನೇಹಾ ಕುಟುಂಬ ಮತ್ತು ಸಮಾಜಕ್ಕೆ ಘೋರ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ನ ತುಷ್ಠೀಕರಣ ನೀತಿಯ ಒಂದು ಪರಿಣಾಮ ಇದು. ರಾಮೇಶ್ವರ ಬ್ಲಾಸ್ಟ ಆದಾಗ ಸಿಲಿಂಡರ್ ಬ್ಲಾಸ್ ಎಂದಿದ್ದರು ಎಂದು ಜೋಶಿ ಆಕ್ರೋಶ ಹೊರಹಾಕಿದ್ದಾರೆ.

ಉಡುಪಿಯ ಕಾಲೇಜ್ ಶೌಚಾಲಯದಲ್ಲಿ ಕ್ಯಾಮರಾ ಇಟ್ಟ ವಿಚಾರದ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ,  ಇದು ಮಕ್ಕಳ ಆಟ ಎಂದು ಗೃಹ ಮಂತ್ರಿ ಹೇಳಿದ್ದರು. ಶಿವಮೊಗ್ಗದ ಈದ್ ಮಿಲಾದ್ ನಲ್ಲಿ ದೊಡ್ಡ ಖಡ್ಗ ಇಟ್ಟಿದ್ದರು. ಸ್ಥಳೀಯ ಕಾರಣ ಎಂಬ ಸಹಜ ಉತ್ತರ ಸಿಎಂ ಕೊಟ್ಟಿದ್ದರು. ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಹಾಗೇ ಅಂದೇ ಇಲ್ಲ ಪ್ರತಿಪಾದಿಸಿದ್ದರು. ಭಯೋತ್ಪಾದಕ ಚಟುವಟಿಕೆ ಮಾಡಿದವರನ್ನು ಬ್ರದರ್ ಎಂದಿದ್ದರು. ಹನುಮಾನ ಚಾಲೀಸ್ ಪ್ರಕರಣ ಆಯ್ತು. ಜೈ ಶ್ರೀರಾಮ ಎಂದವರನ್ನು ಬೆದರಿಸಿದ್ದರು. ಆದರೂ ಕ್ರಮ ಆಗಲಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸರಿ ಇಲ್ಲ. ಮತ ಬ್ಯಾಂಕ್ ರಾಜಕಾರಣ ಮಾಡುತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ವಾಾಕ್ಪ್ರಹಾರ ನಡೆಸಿದ್ದಾರೆ.

ನೇಹಾ ವಿಷಯದಲ್ಲಿಯೂ ಹೇಳಿಕೆ ಹೇಳಿದ್ದಾರೆ. ಮುಸಲ್ಮಾನರು ಅಪರಾಧ ಮಾಡಿದರೆ ಅದು ಅಪರಾಧ ಅಲ್ಲವಾ..?  ಅವಳ ತಂದೆಯೇ ಕಾಂಗ್ರೆಸ್ ಕಾರ್ಪೋರೇಟರ್. ಸರ್ಕಾರ ಸಹಜ ಪ್ರತಿಕ್ರಿಯೆ ಬಂದ್ ಮಾಡಬೇಕು. ಗಂಭೀರವಾಗಿ ತನಿಖೆ ಮಾಡಬೇಕು. ನೇಹಾ ತಂದೆ ಇದರ ಹಿಂದೆ ಬಹಳ ಜನ ಇದ್ದಾರೆ ಎಂದು ಹೇಳಿದ್ದಾರೆ. ಆಕೆಯನ್ನು ಮತಾಂತರ ಮಾಡುವ ಪ್ರಯತ್ನ ನಡೆದಿತ್ತು ಎಂದಿದ್ದಾರೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.

ಗೃಹ ಮಂತ್ರಿಗೆ ಜವಾಬ್ದಾರಿ ಇಲ್ಲ, ಸಿಎಂ ಉಡಾಫೆ ಮಾತು ಹೇಳುತ್ತಾರೆ. ಮೊದಲು ತುಷ್ಠೀಕರಣದಿಂದ ಹೇಳಿಕೆ ಹೇಳಿದ್ದರು. ಈಗ ವಿಷಾದ ವ್ಯಕ್ತಪಡಿಸಿದ್ದಾರೆ. ಯಾಕೆ ಲವ್ ಜಿಹಾದ ಅಲ್ಲ ಅಂತಾ ನೀವೇ ಜಡ್ಜಮೆಂಟ್ ಮಾಡುತ್ತಿರಿ…? ಆಕೆಯ ತಂದೆ ನಿಮ್ಮ ಪಕ್ಷದ ಕಾರ್ಯಕರ್ತ. ಆತನ ಮಾತು ಸ್ವಲ್ಪ ಕೇಳಿ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ. ತನಿಖೆ ಸರಿಯಾಗಿ ಆಗಬೇಕು. ನೇಹಾ ತಂದೆಯ ಅನುಮಾನಗಳನ್ನು ಪರಿಗಣಿಸಬೇಕು. ನಾವು ಈ ಪ್ರಕರಣ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ತನಿಖೆ ಸರಿಯಾಗಿ ಆಗಿದ್ದರೆ ನಾವು ಪ್ರತಿಭಟನೆ ಮಾಡುತ್ತಿದ್ದೇವಾ? ಮಗು ಸಾಯಬಾರದಿತ್ತು ಇದರ ಬಗ್ಗೆ ನಮಗೆ ವಿಷಾದವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮದುವೆಗೆ ಒಪ್ಪದಿದ್ದಕ್ಕೆ ಹತಾಶೆಯಿಂದ ಕೊಂದಿದ್ದಾನೆ: ನೇಹಾ ತಂದೆ ಹೇಳಿದ್ದೇನು? – ಎಫ್‌ಐಆರ್‌ನಲ್ಲಿ ಏನಿದೆ?

ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

ಮೋದಿ ಅವರ ಗ್ಯಾರಂಟಿಗಳು ಫೇಕ್ ಆಗಿವೆ: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ

- Advertisement -

Latest Posts

Don't Miss