ಮಂಚದ ಬಳಿ, ದಿಂಬಿನ ಕೆಳಗೆ ಈ ವಸ್ತುಗಳನ್ನು ಎಂದಿಗೂ ಇಡಬೇಡಿ

Spiritual: ನಾವು ಎಷ್ಟೇ ದುಡ್ಡು ಸಂಪಾದಿಸಿದರೂ, ನೆಮ್ಮದಿಯಾದ ನಿದ್ರೆಯನ್ನು ಖರೀದಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಕೆಲಸದ ಒತ್ತಡ, ಕೆಲವೊಮ್ಮೆ ಮನೆಯಲ್ಲಿ ಕಲಹ ಮತ್ತೆ ಕೆಲವೊಮ್ಮೆ ಆರೋಗ್ಯ ಸಮಸ್ಯೆ, ಹೀಗೆ ಹಲವು ವಿಚಾರಗಳಿಂದ ನೆಮ್ಮದಿಯ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವಿಂದು ಕೆಲವು ಸಲಹೆಗಳನ್ನು ನೀಡಲಿದ್ದೇವೆ. ಕೆಲವೊಮ್ಮೆ ಹಾಸಿಗೆಯ ಮೇಲೆ, ಮಂಚದ ಬಳಿ, ದಿಂಬಿನ ಕೆಳಗೆ ಕೆಲವು ವಸ್ತುಗಳಿದ್ದಾಗ, ನೆಮ್ಮದಿಯ ನಿದ್ರೆ ಮಾಡಲು ಆಗೋದಿಲ್ಲ. ಯಾವುದು ಅಂಥ ವಸ್ತುಗಳು ಅಂತಾ ತಿಳಿಯೋಣ ಬನ್ನಿ..

ಚಪ್ಪಲಿ: ಕೆಲವರು ಮನೆಯಲ್ಲೂ ಚಪ್ಪಲಿ ಹಾಕಿ ಓಡಾಡುತ್ತಾರೆ. ಮತ್ತು ಅದನ್ನು ತಂದು, ತಾವು ಮಲಗುವ ಸ್ಥಳದಲ್ಲಿ, ಕೆಲವೊಮ್ಮೆ ಮಂಚದ ಕೆಳಗೆ ಇರಿಸುತ್ತಾರೆ. ಮನೆಯಲ್ಲೇ ಬಳಸುವ ಚಪ್ಪಲಿಯಾದರೂ ಕೂಡ, ಅದನ್ನು ಬೆಡ್‌ ರೂಮ್ ಹೊರಗೆ ಬಿಡುವುದು ಉತ್ತಮ. ಇದು ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗುತ್‌ತದೆ. ಇದರಿಂದ ಆರ್ಥಿಕ ಸಮಸ್ಯೆ, ಸಂಬಂಧ ಹಾಳಾಗುವಂತೆ ಮಾಡುತ್ತದೆ.

ಬೀಗದ ಕೈ: ಇನ್ನು ಕೆಲವರು ದಿಂಬಿನ ಕೆಳಗೆ ಬೀರು ಬೀಗದ ಕೈ, ಅಥವಾ ಯಾವುದಾದರೂ ಕಬ್ಬಿಣದ ವಸ್ತುವಿಟ್ಟು ಮಲಗುತ್ತಾರೆ. ಇದು ಕೂಡ ಒಳ್ಳೆಯದಲ್ಲ. ಇದರಿಂದ ಕೆಟ್ಟ ಕನಸು ಬೀಳುತ್ತದೆ. ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ದಿಂಬಿನ ಕೆಳಗೆ ಕೀ ಅಥವಾ ಯಾವುದೇ ಕಬ್ಬಿಣದ ವಸ್ತುಗಳನ್ನು ಇರಿಸಬೇಡಿ.

ಇನ್ನು ಕೊನೆಯದಾಗಿ ಚೂಪಾದ ವಸ್ತು, ಮೊಬೈಲ್ ಸೇರಿ ಯಾವುದೇ ಗ್ಯಾಜೇಟ್ಸ್‌ ಮಂಚದ ಬಳಿ, ತಲೆಯ ಬಳಿ ಇರಿಸಬೇಡಿ. ಇದರಿಂದ ಆರೋಗ್ಯ ಹಾಳಾಗುತ್ತದೆ. ಬ್ರೇನ್ ಟ್ಯೂಮರ್ ಸೇರಿ, ಹಲವು ಅನಾರೋಗ್ಯ ಸಮಸ್ಯೆ ಬರಲು ಕಾರಣವಾಾಗುತ್ತದೆ.

About The Author