Sunday, September 8, 2024

Latest Posts

ಇಂದಿನಿಂದಲೇ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ವಿತರಣೆ ಅರಂಭ

- Advertisement -

Political News: ಹುಬ್ಬಳ್ಳಿ : ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಇಂದಿನಿಂದಲೇ ಆರಂಭಿಸಲಾಗಿದೆ ಎಂದು ಅಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಈವರೆಗೆ 2 ಲಕ್ಷ 90 ಸಾವಿರ ಅರ್ಜಿ ಬಂದಿವೆ. ಇದರಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಅರ್ಜಿ ಪರಿಷ್ಕರಣೆ ಮಾಡಿ ಅರ್ಹರಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಈಗಾಗಲೇ ಅರ್ಜಿ ಹಾಕಿಕೊಂಡು ಕಾಯುತ್ತಿರುವ ಈ ಜನರಿಗೆ ಕಾರ್ಡ್ ವಿತರಣೆ ಆದಷ್ಟು ಬೇಗ ಮಾಡುವುದು ನಮ್ಮ ಆದ್ಯತೆಯಾಗಿದೆ.ಹೀಗಾಗಿ ಮೊದಲು ಇವರಿಗೆ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಅನರ್ಹರೂ ಬಿಪಿಎಲ್ ಕಾರ್ಡ್ ಹೊಂದಿರುವವರ ಕಾರ್ಡ್ ರದ್ಧತಿ ಪ್ರಕ್ರಿಯೆ ನಡೆಯುತ್ತಿದೆ. ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುತ್ತಿದೆ. ಅದೇ ರೀತಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಜಾಲಕ್ಕೆ ಬ್ರೇಕ್ ಹಾಕಲು ಅಧಿಕಾರಿಗಳ ತಂಡ ಕ್ರಮ ಜರುಗಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದು ಸಚಿವರು ಹೇಳಿದರು.

ಕಾರ್ಡ್ ರದ್ದು ಪಡಿಸಲ್ಲ: ಅನೇಕರು ಬಿಪಿಎಲ್ ಕಾರ್ಡ್ ಹೊಂದಿದ್ದರೂ ಪಡಿತರ ಪಡೆಯುತ್ತಿಲ್ಲ. ಅದರೆ, ಆರೋಗ್ಯ ಸೇವೆ ಪಡೆಯುವುದು ಸೇರಿದಂತೆ ಬೇರೆ ಬೇರೆ ಯೋಜನೆಗೆ ಬಳಸಿಕೊಳ್ಳುತ್ತಾರೆ. ಹೀಗಾಗಿ ಅಂತಹವರ ಕಾರ್ಡ್ ರದ್ದು ಪಡಿಸಲ್ಲ ಎಂದು ಹೇಳಿದರು.

ಹೊರ ರಾಜ್ಗದಿಂದ ಅಕ್ಕಿ ತರುವ ಪ್ರಯತ್ನ:
ಅಕ್ಕಿ ಕೊರತೆ ಇದ್ದುದರಿಂದ ಸದ್ಯ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಕೊಡುತ್ತಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಡ ರಾಜ್ಯದಿಂದ ಅಕ್ಕಿ ಪಡೆಯುವ ಪ್ರಯತ್ನ ಜಾರಿಯಲ್ಲಿದೆ. ಅಕ್ಕಿ ಲಭಿಸಿದ ತಕ್ಷಣ ಹಣ ಪಾವತಿ ನಿಲ್ಲಿಸಿ ಈ ಮೊದಲಿದ್ದಂತೆ ಅಕ್ಕಿ ಕೊಡಲಾಗುತ್ತದೆ ಎಂದು ಹೇಳಿದರು.

ಪಡಿತರ ವಿತರಕರು ಕಮಿಷನ್ ಕಡಿಮೆಯಾಗಿದೆ: 10 ಕೆಜಿ ಅಕ್ಕಿ ಕಮಿಷನ್ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇದು ತಾತ್ಕಾಲಿಕವಷ್ಟೇ. ಅಕ್ಕಿ ಲಭಿಸಿದ ತಕ್ಷಣ ಅವರಿಗೆ ಸಿಗಬೇಕಾದ ಕಮಿಷನ್ ಸಿಗಲಿದೆ. ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.

ಅಕ್ಕಿಯಲ್ಲಿ ರಾಜಕೀಯ ಬೆರೆಸಿದ ಕೇಂದ್ರ: ಆಹಾರ ಭದ್ರತೆ ಹಕ್ಕು ಜಾರಿ ಮಾಡಿದ್ದೇ ಯುಪಿಎ ಸರ್ಕಾರ. ಈಗಿನ ಕೇಂದ್ರ ಸರ್ಕಾರ ಅದನ್ನು ಮುಂದುವರಿಸಿದೆ. ಆದರೆ, ರಾಜ್ಯಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ರಾಜಕೀಯ ಬೆರೆಸಿತು. ಪರವಾಗಿಲ್ಲ. ನಮ್ಮ ಸರ್ಕಾರ ರಾಜ್ಯದ ಜನರಿಗೆ ಮಾತು ಕೊಟ್ಟಂತೆ ನಡೆಯುತ್ತಿದೆ ಎಂದು ಹೇಳಿದರು.

‘ಅವರಲ್ಲಿ ಹೊಂದಾಣಿಕೆ ಇಲ್ಲ ಅನ್ನೋದು ಗೊತ್ತಾಗ್ತಿದೆ. ಬೆಳಗ್ಗೆ ಎದ್ರೆ ನಾಯಿ, ನರಿ ತರ ಕಿತ್ತಾಡ್ತಿದ್ದಾರೆ’

‘ಆ ನಾಲ್ಕು ಜನರ ನಡುವೆ ಜಗಳ ಹಚ್ಚಿ, ಸಿದ್ದರಾಮಯ್ಯ ಸಿಎಂ ಆಗಿರಬೇಕು ಅಂದುಕೊಂಡಿದ್ದಾರೆ’

ಸರ್ಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಯತ್ತ ಚಿತ್ತ‌ಹರಿಸಿದ ಕಾಂಗ್ರೆಸ ‌ಶಾಸಕ

- Advertisement -

Latest Posts

Don't Miss