Thursday, July 10, 2025

Latest Posts

ದೇಶದ ಭದ್ರತಾ ಸುರಕ್ಷತೆಗಾಗಿ ಸಿಸಿಟಿವಿ ಹೊಸ ನಿಯಮಗಳಿನ್ನೂ ಕಠಿಣ: ಚೀನಾ ಕಂಪನಿಗಳೇ ಟಾರ್ಗೇಟ್..

- Advertisement -

National News: ಭಾರತವು ತನ್ನ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ತನ್ನ ಗೌಪ್ಯತೆ ಮತ್ತು ಕಣ್ಗಾವಲು ನೀತಿಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ರೂಲ್ಸ್ ಬರಲು ಕಾರಣವೇನು ಅಂದ್ರೆ ಚೀನಾದ ಕ್ಯಾಮೆರಾಗಳು.

ಹೌದು.. ಚೀನಾದ ಕಂಪನಿಗಳಿಂದ ನಿರ್ಮಿತವಾದ ಕ್ಯಾಮೆರಾಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.  ಈ ಕ್ರಮವು ದೇಶದ ಭದ್ರತೆಯನ್ನು ಖಾತರಿ ಪಡಿಸುವ ಗುರಿಯನ್ನು ಹ“ಂದಿದ್ದರೂ, ಇದು ಉದ್ಯಮದಲ್ಲಿಗ“ಂದಲ ಮತ್ತು ಸರಬರಾಜು ಸರಪಳಿಯಲ್ಲಿ ಅಡಚಣೆಯಾಗಿದೆ.

ಸರ್ಕಾರಿ ಪ್ರಯೋಗಾಲದಲ್ಲಿ ಕಡ್ಡಾಯ ಪರೀಕ್ಷೆ ನೂತನ ಭದ್ರತಾ ನಿಯಮಗಳ ಪ್ರಕಾರ, ಸಿಸಿಟಿವಿ ಕ್ಯಾಮೆರಾಗಳ ತಯಾರಕರು ತಮ್ಮ ಹಾರ್ಡ್‌ವೇರ್, ಸಾಫ್ಟ್ವೇರ್, ಸೋರ್ಸ್ ಕೋಡ್‌ಗಳನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ನೀಡಬೇಕು.

ಏಪ್ರಿಲ್ 9, 2025ರಿಂದ ಜಾರಿಗೆ ಬಂದಿರುವ ಈ ನಿಯಮಗಳು ಇಂಟರ್‌ನೆಟ್ ಸಂಪರ್ಕಿತ ಎಲ್ಲಾ ಸಿಸಿಟಿವಿ ಮಾದರಿಗಳಿಗೆ ಅನ್ವಯವಾಗುತ್ತದೆ. ಚೀನಾದ ಹಿಕ್‌ವಿಷನ್, ಶಿಯಾಮಿ, ದಹುವಾ, ದಕ್ಷಿಣ ಕೋರಿಯಾದ ಹನ್ವಾ ಮತ್ತು ಅಮೆರಿಕಾದ ಮೋಟೋರೋಲಾ ಸೋಲ್ಯೂಷನ್‌ನಂಥ ಕಂಪನಿಗಳು ತಮ್ಮ ಕ್ಯಾಮೆರಾಗಳನ್ನು ಭಾರತದಲ್ಲಿ ಮಾರಾಟ ಮಾಡುವ ಮುನ್ನ ಪ್ರಯೋಗಾಾಲಯದಲ್ಲಿ ಪರೀಕ್ಷೆಗೆ ~~ಳಪಡಿಸಬೇಕು.

2015ರಿಂದ 2019ರವರೆಗೆ ಭಾರತದ ಸೈಬರ್ ಭದ್ರತಾ ಮುಖ್ಯಸ್ಥರಾಗಿದ್ದ ಗುಲ್ಶನ್ ರಾಯ್, ಇಂಟರ್ನೆಟ್‌ಗೆ ಸಂಪರ್ಕಿತ ಸಿಸಿಟಿವಿ ಕ್ಯಾಮೆರಾಗಳನ್ನು ದೂರದಿಂದಲೇ ಯಾರಾದರೂ ನಿಯಂತ್ರಿಸಬಹುದು. ಇದು ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ ಉಪಕರಣಗಳನ್ನು ಬಲಿಷ್ಟ ಮಾಡುವ ಮತ್ತು ಸುರಕ್ಷಿತವಾಗಿರಿಸುವ ಅಗತ್ಯವಿದೆ ಎಂದು ಹೇಳಿದ್ದರು.

ಇನ್ನು ಮುಖ್ಯವಾಗಿ ಚೀನಾದ ಕಂಪನಿಗಳ ಮೇಲೆ ನಿಗಾವಹಿಸುವುದು ಮುಖ್ಯ ವಿಚಾರವಾಗಿದೆ. 2020ರಲ್ಲಿ ಭಾರತ-ಚೀನಾ ಗಡಿ ಘರ್ಷಣೆಯ ನಂತರ ಭಾರತವು ಟಿಕ್‌ ಟಾಕ್‌ ಸೇರಿದಂತೆ ಹಲವು ಚೀನಾದ ~~ಡೆತನದ ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದೀಗ ಸಿಸಿಟಿವಿ ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ ಈ ನಿಯಮ ತರಲಾಗಿದೆ. ಇದು ಚೀನಾದ ಹಲವು ಕಂಂಪನಿಗಳ ಮೇಲೆ ಪರಿಣಾಮ ಬೀರಲಿದೆ.

ಬರೀ ಭಾರತವಲ್ಲದೇ, ಅಮೆರಿಕ ಸಹ ಚೀನಾ ಕಂಪನಿಯ ಕ್ಯಾಮೆರಾಗಳನ್ನು ನಿಷೇಧಿಸಿದೆ. ಆಸ್ಟ್ರೇಲಿಯಾ ಮತ್ತು ಬ್ರಿಟನ್ ಕಂಪನಿಗಳು ಕೂಡ ಇದೇ ಕ್ರಮವನ್ನು ಅನುಸರಿಸಿದೆ.

ಇನ್ನು ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಭಾರತದ ಸಿಸಿಟಿವಿ ಮಾರುಕಟ್ಟೆಯೂ 2024ರಲ್ಲಿ 3.5 ಶತಕೋಟಿ ಡಾಲರ್ನಿಂದ 2030ರ ವೇಳೆಗೆ 7 ಶತಕೋಟಿ ಡಾಲರ್ ಏರಲಿದೆ.

ದೇಶದಲ್ಲಿ ಲಕ್ಷಾಂತರ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, ದೆಹಲಿಯಲ್ಲೇ 2ವರೆ ಲಕ್ಷಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳಿದೆ. ಈ ನಿಯಮಗಳು ಭದ್ರತೆಯನ್ನು ಹೆಚ್ಚಿಸಿದ್ದರೂ, ಉದ್ಯಮದಲ್ಲಿ ಅಡಚಣೆಯನ್ನುಂಟು ಮಾಡಿದೆ. ಭವಿಷ್ಯದಲ್ಲಿ ಈ ನಿಯಮಗಳನ್ನು ಇಂಟರ್ನೆಟ್ ಆಧಾರಿತ ಉಪಕರಣಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

- Advertisement -

Latest Posts

Don't Miss