Techno News : ಹೊಸದಾಗಿ ಮೊಬೈಲ್ ತೆಗೆದುಕೊಂಡ್ರೆ ಶಾಪ್ ನ ವ ಮೊದಲು ಹೇಳೋ ಮಾತು ಅಂದ್ರೆ ಅದು ಚಾರ್ಜ ಫುಲ್ ಮಾಡಿ ಆಮೇಲೆ ಬಳಸಿ ಆದ್ರೆ ಚಾರ್ಜ್ ಮಾಡದೇ ಮೊಬೈಲ್ ಬಳಸಿದ್ರೆ ಏನಾಗುತ್ತೆ…?! ಯಾಕೆ ಫುಲೀ ಚಾರ್ಜ್ ಮಾಡೋಕೆ ಹೇಳ್ತಾರೆ ಗೊತ್ತಾ..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…………..
ನೀವು ಯಾವುದೇ ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಚಾರ್ಜ್ ಫುಲ್ ಮಾಡಿದ ನಂತರವೇ ಉಪಯೋಗಿಸಿ, ಯಾವುದೇ ಕಾರಣಕ್ಕೂ ಚಾರ್ಜ್ ಮಾಡದೆ ಈ ಹೊಸ ಮೊಬೈಲ್ ಅನ್ನು ಬಳಕೆ ಮಾಡಬೇಡಿ ಎಂದು ಹೇಳುತ್ತಾರೆ.
ಇದಕ್ಕೆ ಪ್ರಮುಖ ಕಾರಣನೇ ಮೊಬೈಲ್ ನಲ್ಲಿರೋ ಲೀ-ಐಯಾನ್ ಬ್ಯಾಟರಿ : ಲಿ- ಐಯಾನ್ ಬ್ಯಾಟರಿಯಲ್ಲಿನ ಪ್ರತಿ ಕೋಶದ ಡೆಪ್ತ್ ಆಫ್ ಡಿಸ್ಟಾರ್ಜ್ ಅನ್ನು ಪೂರ್ತಿ ತಗ್ಗಿಸಲು ಮೊಬೈಲ್ ಕಂಪನಿಗಳು ಸೂಚಿಸುತ್ತವೆ. ಬ್ಯಾಟರಿಯು ಶೇ. 100 ರಷ್ಟು ಸಂಪೂರ್ಣ ಚಾರ್ಜ್ ಆಗಿದ್ದರೆ ಬ್ಯಾಟರಿಯ ಡಿಒಡಿ 0% ಆಗಿದೆ ಎಂದರ್ಥ.ಆಗ ನಿಮ್ಮ ಮೊಬೈಲ್ಗೆ ಯಾವುದೆ ತೊಂದರೆ ಆಗುವುದಿಲ್ಲ.
20% ಗಿಂತ ಕಡಿಮೆ ಇರಬೇಕು: ಮೇಲೆ ತಿಳಿಸಿದಂತೆ ಲಿ-ಐಯಾನ್ ಬ್ಯಾಟರಿಯ ಆಔಆ ಡೆಪ್ತ್ ಆಫ್ ಡಿಸ್ಟಾರ್ಜ್ ಪೂರ್ತಿ ಕಡಿಮೆ ಇದ್ದರೆ ಒಳ್ಳೆಯದು. ಅಂದರೆ, ಸಂಪೂರ್ಣ ಚಾರ್ಜ್ ಆದ ಬ್ಯಾಟರಿ ಫೋನ್ ಶುರು ಮಾಡಲು ಇರಬೇಕು.
ಹಾಗಾಗಿ, ಬ್ಯಾಟರಿಯಲ್ಲಿ ಕನಿಷ್ಟಪಕ್ಷ 20% ಗಿಂತ ಕಡಿಮೆ ಡಿಒಡಿ ಇರಬೇಕು. ಅಂದರೆ 80% ಹೆಚ್ಚು ಬ್ಯಾಟರಿ ಶಕ್ತಿ ತುಂಬಿರಬೇಕು. ಹಾರ್ಡ್‌ವೇರ್ ರಕ್ಷಣೆಗಾಗಿ: ತುಂಬಾ ದಿನಗಳಿಂದ ಬಳಕೆಯಲ್ಲಿರದ ಮೊಬೈಲ್ ಬ್ಯಾಟರಿ, ಒಮ್ಮೆಲೇ ಮೊಬೈಲ್‌ನ ಎಲ್ಲಾ ಬಿಡಿಭಾಗಗಳಿಗೂ ವಿಧ್ಯುತ್ ಶಕ್ತಿಯನ್ನು ಪೂರೈಸಬೇಕಾಗುತ್ತದೆ.
ಇಂತಹ ಸಮಯದಲ್ಲಿ ಮೊಬೈಲ್‌ನ ಹಾರ್ಡ್‌ವೇರ್ ಭಾಗಗಳು ಹೆಚ್ಚು ವಿಧ್ಯುತ್ ಶಕ್ತಿಯನ್ನು ಬೇಡುವುದರಿಂದ ಮೊಬೈಲ್ ಬ್ಯಾಟರಿ ಪೂರ್ತಿ ತುಂಬಿರಬೇಕಾಗುತ್ತದೆ.
ಚಾರ್ಜ್ ಮಾಡದಿದ್ದರೆ ಏನಾಗುತ್ತದೆ?: ಮೊಬೈಲ್‌ಗಳು ತಯಾರಾಗಿ ಓರ್ವ ಗ್ರಾಹಕನ ಕೈ ತಲುಪಲು ಕನಿಷ್ಟ ಎಂದರೂ 3 ರಿಂದ 6 ತಿಂಗಳ ಸಮಯ ಹಿಡಿಯುತ್ತದೆ. ಈ ಸಮಯದಲ್ಲಿ ಬ್ಯಾಟರಿ ಸೆಲ್‌ಗಳು ಸಂಕುಚಿತಗೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಒಮ್ಮೆ ಬ್ಯಾಟರಿ ಪೂರ್ಣ ಡೆಡ್ ಆದರೆ ಅದರ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ.
Chocolate : ಆಯುರ್ವೇದ ಹೆಸರಲ್ಲಿ ಗಾಂಜಾ ಚಾಕಲೇಟ್…! ಮಕ್ಕಳೇ ಇವರ ಟಾರ್ಗೆಟ್ ..?!