Uttar Pradesh: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದಿನದಿಂದ ದಿನಕ್ಕೆ ಬಾಲಕ ರಾಮನ ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದಾಗಲೇ 11 ದಿನ ಕಳೆದಿದ್ದು, 25 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ, ರಾಮನ ದರ್ಶನ ಪಡೆದಿದ್ದಾರೆಂದು ಹೇಳಲಾಗಿದೆ. ಬರೀ 11 ದಿನಗಳಲ್ಲಿ 11 ಕೋಟಿ ಕಾಣಿಕೆಯೂ ಸಂಗ್ರಹವಾಗಿದೆ.
ಇದೀಗ ಅಯೋಧ್ಯೆ ರಾಮಮಂದಿರದಲ್ಲಿ ಬಾಲಕರಾಮನ ದರ್ಶನ ಮಾಡಬಯಸುವ ಭಕ್ತರಿಗೆ ಹೊಸ ರೂಲ್ಸ್ ಜಾರಿಯಾಗಿದೆ. ಈ ರೂಲ್ಸ್ ನೀವು ಫಾಲೋ ಮಾಡಿದ್ರೆ, ನಿಮಗೆ ಅರ್ಧ ಗಂಟೆ ಕಾಯುವ ಅಗತ್ಯವೇ ಇರುವುದಿಲ್ಲ. ಅದೇನಂದ್ರೆ ಯಾವ ಬಳಿ ಯಾವ ಸಾಮಾನು, ಮೊಬೈಲ್, ಬ್ಯಾಗ್ ಏನೂ ಇರುವುದಿಲ್ಲವೋ, ಖಾಲಿ ಕೈಯ್ಯಲ್ಲಿರುತ್ತಾರೋ, ಅಂಥವರಿಗೆ ಬೇಗ ಬೇಗ ದರ್ಶನಕ್ಕೆ ಕಳಿಸಲಾಗುತ್ತದೆ. ಅಂಥವರಿಗಾಗಿ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಮಾಡಲಾಗಿದೆ. ಈ ಲೈನ್‌ನಲ್ಲಿ ನಿಂತ್ರೆ, ಬೇಗ ದೇವರ ದರ್ಶನವಾಗುತ್ತದೆ.
ಇಲ್ಲಿಗೆ ಬಂದ ಹಲವು ಭಕ್ತರು ಈ ಬಗ್ಗೆ ಸಂತಸ ಹೊರ ಹಾಕಿದ್ದು, ದೇವರ ದರ್ಶನಕ್ಕಾಗಿ ಹಲವು ಗಂಟೆಗಳ ಕಾಲ ನಾವು ಕಾಯಬೇಕಿತ್ತು. ಆದರೆ ಟ್ರಸ್ಟ್‌ನವರು ಈ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಮಾಡಿದ್ದು, ಅರ್ಧ ಗಂಟೆ ಬೇಗ ದರ್ಶನ ಮಾಡಿ ನಾವು ಬಂದಿದ್ದೇವೆ ಎಂದಿದ್ದಾರೆ. ಇಷ್ಟೇ ಅಲ್ಲದೇ, ಈ ರೂಲ್ಸ್‌ನಿಂದ ವಯಸ್ಸಾದವರು ಕೂಡ ಬೇಗ ಬೇಗ ರಾಮನ ದರ್ಶನ ಮಾಡಿ ಬರಬಹುದು ಎಂದು ಭಕ್ತರು ಹೇಳುತ್ತಾರೆ.
ಈ ರೂಲ್ಸ್ ಜಾರಿಯಾಗುವ ಮುನ್ನ ಲಕ್ಷಾಂತರ ಮಂದಿ ರಾಮನ ದರ್ಶನಕ್ಕಾಗಿ ತಾಸುಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾಗಿತ್ತು. ಆದರೆ ಇದೀಗ ರಾಮಲಲ್ಲಾ ದರ್ಶನ ಮಾಡಲು ಹೊಸ ರೂಲ್ಸ್ ಬಂದಿದ್ದು, ಜನ ತಮ್ಮ ಸಾಮಾನು ಸರಂಜಾಮುಗಳಿಗೆ ಒಂದು ವ್ಯವಸ್ಥೆ ಮಾಡಿ, ದೇವರ ದರ್ಶನಕ್ಕೆ ಬರಬೇಕಾಗಿದೆ.
‘ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದಿಂದ ನೊಂದು ಡಿ.ಕೆ ಸುರೇಶ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ’
ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ