Friday, November 22, 2024

Latest Posts

ಬೆಂಗಳೂರು-ಕಲಬುರಗಿ ಹೊಸ ರೈಲು ಸಂಚಾರ?

- Advertisement -

ಕಲಬುರಗಿ : ಕಲಬುರಗಿ ಮತ್ತು ಬೆಂಗಳೂರು ನಡುವೆ ಹೊಸ ರೈಲು ಓಡಿಸಬೇಕು ಎಂದು ಸಂಸದ ಡಾ. ಉಮೇಶ್‌ ಜಾಧವ್ ಕೇಂದ್ರ ರೈಲ್ವೆ ವಿಭಾಗವನ್ನು ಒತ್ತಾಯಿಸಿದರು. ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗಿದ್ದು, ಹೊಸ ರೈಲು ಅಗತ್ಯವಿದೆ ಎಂದು ತಿಳಿಸಲಾಗಿದೆ.

ಪುಣೆ ಮತ್ತು ಸೊಲ್ಹಾಪುರ ಸಂಸದರ ವಿಭಾಗೀಯ ಮಟ್ಟದ ಸಭೆಯಲ್ಲಿ ಮಾತನಾಡಿದ ಡಾ. ಉಮೇಶ್ ಜಾಧವ್, ಕೇಂದ್ರ ರೈಲ್ವೆ ಜನರಲ್ ಮ್ಯಾನೇಜರ್‌ಗೆ ಹೊಸ ರೈಲು ಓಡಿಸುವಂತೆ ಒತ್ತಾಯಿಸಿದರು.

ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಎಲ್ಲಾ ರೈಲಗಳು ಇನ್ನೂ ಆರಂಭವಾಗಿಲ್ಲ. ಬೇರೆ ವಿಭಾಗಗಳಲ್ಲಿ ರೈಲುಗಳ ಸೇವೆ ಆರಂಭವಾಗಿದೆ ಎಂದು ಸಂಸದರು ಸಭೆಯಲ್ಲಿ ಹೇಳಿದರು. ಕಲಬುರಗಿ-ಹೈದರಾಬಾದ್ ರೈಲು ಸೇವೆ ಆರಂಭವಾಗದಿರುವ ಕುರಿತು ಸಹ ಸಂಸದರು ಧ್ವನಿ ಎತ್ತಿದರು.

ಅಧಿಕಾರಿಗಳು ಮಾತನಾಡಿದ ಕಲಬುರಗಿ-ಹೈದರಾಬಾದ್ ರೈಲು ಸಂಚಾರವನ್ನು ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ರೈಲ್ವೆ ಬೋರ್ಡ್ ರದ್ದುಗೊಳಿಸಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ರದ್ದುಗೊಳಿಸಿದ ಸೊಲ್ಹಾಪುರ-ಗುಂತಕಲ್ ಡೆಮು ರೈಲು ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಸಂಸದರು ಒತ್ತಾಯಿಸಿದರು.

ಸಿಕಂದರಾಬಾದ್-ಚಿತ್ತಾಪುರ ರೈಲನ್ನು ಕಲಬುರಗಿ ತನಕ ವಿಸ್ತರಣೆ ಮಾಡುವ ಕಾರ್ಯ ಇನ್ನೂ ನಡೆದಿಲ್ಲ ಎಂದು ಸಂಸದರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ದಕ್ಷಿಣ ರೈಲ್ವೆ 2021ರ ಜುಲೈನಲ್ಲಿಯೇ ರೈಲು ಸೇವೆ ವಿಸ್ತರಣೆಗೆ ಒಪ್ಪಿಗೆ ನೀಡಿದೆ ಎಂದು ಸಂದಸರು ಹೇಳಿದರು.

ಕಲಬುರಗಿ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಎರಡು ಲಿಫ್ಟ್‌ ಆಳವಡಿಕೆ, ಪ್ಲಾಟ್ ಫಾರಂ ನಂಬರ್ 4ರಲ್ಲಿ ನಿರೀಕ್ಷಣಾ ಕೊಠಡಿ ಬಗ್ಗೆಯೂ ಸಭೆಯಲ್ಲಿ ಸಂಸದರು ವಿಷಯ ಪ್ರಸ್ತಾಪ ಮಾಡಿದರು.

- Advertisement -

Latest Posts

Don't Miss