- Advertisement -
Haveri News: ಹಾವೇರಿ: ಕಸ ಹಾಕುವ ಜಾಗದಲ್ಲಿ ಹೆಣ್ಣು ನವಜಾತ ಶಿಶು ಪತ್ತೆಯಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಆಗ ತಾನೇ ಜನಿಸಿದ ಮಗುವನ್ನು ಕ್ರೂರಿಗಳು ಕಸ ಹಾಕುವ ಜಾಗದಲ್ಲಿ ಬಿಸಾಕಿ ಹೋಗಿದ್ದಾರೆ.
ಶಿಗ್ಗಾವಿಯ ಜಯನಗರ ಚಾಳದ ಹಿಂದಿನ ರಸ್ತೆಯಲ್ಲಿ ಮಗು ಪತ್ತೆಯಾಗಿದ್ದು, ಮಗುವಿಗೆ ಅಪಾಯವಾಗುವಂತ ಸ್ಥಿತಿಯಲ್ಲಿ ಬಿಸಾಕಲಾಗಿದೆ. ಸಾರ್ವಜನಿಕರು ಕಸ ಹಾಕಲು ಹೋದಾಗ, ಮಗು ಪತ್ತೆಯಾಗಿದೆ. ಆಗ ಸ್ಥಳೀಯರ ಸಹಾಯದಿಂದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ, ಮಗು ಸಾವನ್ನಪ್ಪಿದೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -