ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರೋ ಸಂಸದೆ ಸುಮಲತಾ ನಾಳೆ ಮಂಡ್ಯದ ಜನತೆಗೆ ಅಭಿನಂದನೆ ಹೇಳೋ ಸಲುವಾಗಿ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಚುನಾವಣೆ ಮುಗಿದ ಬಳಿಕ ಮಂಡ್ಯದತ್ತ ಸುಳಿಯದ ಸಂಸದೆ ಸುಮಲತಾ ನಾಳೆ ವಿಜಯೋತ್ಸವ ಆಚರಿಸೋ ಸಲುವಾಗಿ ತಮ್ಮ ಕ್ಷೇತ್ರ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ ನಗರದಲ್ಲಿರೋ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ವಿಜಯೋತ್ಸವಕ್ಕಾಗಿ ಭರ್ಜರಿ ವೇದಿಕೆ ಸಿದ್ದವಾಗ್ತಿದೆ.
ಇನ್ನು ನಾಳಿನ ವಿಜಯೋತ್ಸವದೊಂದಿಗೆ ಸುಮಲತಾ ಪತಿ ನಟ ಅಂಬರೀಶ್ ಹುಟ್ಟುಹಬ್ಬವನ್ನೂ ವೇದಿಕೆ ಮೇಲೆ ಆಚರಿಸಲಾಗುತ್ತೆ. ಸುಮಲತಾಗೆ ವಿಜಯೋತ್ಸವದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ , ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಮತ್ತಿತರರು ಭಾಗಿಯಾಗಲಿದ್ದಾರೆ.
ಕಾವೇರಿ ನೀರು ಹರಿಸಲು ಆದೇಶದ ಬಗ್ಗೆ ಡಿ.ಕೆ.ಸುರೇಶ್ ಏನ್ ಹೇಳ್ತಾರೆ ಗೊತ್ತಾ..? ತಪ್ಪದೇ ಈ ವಿಡಿಯೋ ನೋಡಿ.