Friday, July 11, 2025

Latest Posts

ಅಮ್ಮಮ್ಮನ ಕ್ಯೂಟ್ ಕ್ಯೂಟ್ ರೀಲ್ಸ್ ಕಂಡಿರಾ..?

- Advertisement -

ಕನ್ನಡತಿ ಸಿರಿಯಲ್‌ನಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಅಮ್ಮಮ್ಮನ ಪಾತ್ರ ಕೂಡಾ ಒಂದು. ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರ ಪ್ರೀತಿಗೆ ಪಾತ್ರರಾದವರು ಚಿತ್ಕಳಾ ಬಿರಾದಾರ್. ಈ ಮುಂಚೆ ನಾವು ಇವರನ್ನು ಹಲವು ಸಿನಿಮಾ, ಧಾರಾವಾಹಿಗಳಲ್ಲಿಯೂ ನೋಡಿದ್ದೇವೆ. ಆದ್ರೆ ಇವರಿಗೆ ಉತ್ತಮಮ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರ ಕನ್ನಡತಿ ಸಿರಿಯಲ್. ಈ ಧಾರಾವಾಹಿಯಲ್ಲಿ ಬರುವ ಅಮ್ಮಮ್ಮನ ಪಾತ್ರವನ್ನ ಎಲ್ಲರೂ ಮೆಚ್ಚಿದ್ದಾರೆ. ತುಂಬಾ ಜನ ಪ್ರತಿದಿನ ಕನ್ನಡತಿ ಸಿರಿಯಲ್‌ನಾ ತಪ್ಪದೇ ನೋಡೋಕ್ಕೆ ಈ ಅಮ್ಮಮ್ಮನ ಪಾತ್ರವೇ ಕಾರಣ ಅಂದ್ರೆ ತಪ್ಪಾಗಲ್ಲಾ. ಇನ್ನು ಅಮ್ಮಮ್ಮ ಬಿಡುವಿನ ವೇಳೆ ಚೆಂದ ಚೆಂದದ ರೀಲ್ಸ್ ಮಾಡಿ ಇನ್‌ಸ್ಟಾಗೆ ಅಪ್ಲೋಡ್ ಮಾಡ್ತಾರೆ. ಅವರ ಚೆಂದದ ವೀಡಿಯೋದ ಲಿಂಕ್ ಇಲ್ಲಿದೆ ನೋಡಿ..

ಈಗಿನ ಟ್ರೆಂಡ್ ಆಗಿರುವ ಬನ್ನೋರೆ ಹಾಡಿಗೆ ಪೋಸ್ ಕೊಟ್ಟಿರುವ ಅಮ್ಮಮ್ಮಾ , ನಿದ್ದೆ ತೂಗುವಂತೆ ಆ್ಯಕ್ಟ್ ಮಾಡಿದ್ದಾರೆ. ಈ ರೀಲ್ಸ್ ನೋಡೋಕ್ಕೆ ಮಜವಾಗಿದ್ದು, ಡಿಫ್ರೆಂಟ್ ಆಗಿದೆ.

https://www.instagram.com/reel/CWst2pcgj0C/

ಇನ್ನೊಂದು ರೀಲ್ಸ್‌ನಲ್ಲಿ ಅಮ್ಮಮ್ಮ ಬರೀ ಆಕ್ಟಿಂಗ್, ಡಾನ್ಸಿಂಗ್‌ನಲ್ಲಷ್ಟೇ ಮುಂದಲ್ಲ. ಬದಲಾಗಿ ಡ್ರಾವಿಂಗ್‌ನಲ್ಲೂ ಮುಂದೆ ಅಂತಾ ತೋರಿಸಿಕೊಟ್ಟಿದ್ದಾರೆ. ಈ ರೀಲ್ಸ್‌ನಲ್ಲಿ ಅಮ್ಮಮ್ಮಾ ಟ್ರ್ಯಾಕ್ಟರ್ ಓಡಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

https://www.instagram.com/reel/CVxsFElAzwi/

ಇನ್ನು ಟೀಚರ್ಸ್‌ ಡೇ ಸಂಭ್ರಮದಲ್ಲಿದ್ದ ಚಿತ್ಕಳಾ ಅವರು ಮಾಡರ್ನ್‌ ಡ್ರೆಸ್‌ನಲ್ಲಿ ಡಾನ್ಸ್ ಮಾಡಿದ್ದು, ಮಕ್ಕಳ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋದಲ್ಲಿರೋದು ನಿಜವಾಗ್ಲೂ ಅಮ್ಮಮ್ಮಾನೇನಾ ಅನ್ನುವಷ್ಟು ಯಂಗ್ ಆಗಿ ಕಾಣ್ತಿದ್ದಾರೆ ಚಿತ್ಕಳಾ ಬಿರಾದಾರ್.

https://www.instagram.com/reel/CTb6U5TgUvx/

- Advertisement -

Latest Posts

Don't Miss