ನಾವು ನೀವು ನೋಡಿರುವಂತೆ, ಬಾಲಿವುಡ್ ಸೆಲೆಬ್ರಿಟಿಗಳು ಯಾವಾಗಲೂ ಜುಮ್ ಅಂತಾ ಓಡಾಡಿಕೊಂಡಿರ್ತಾರೆ. ಅವರು ಹಾಕುವ ಸೂಟು ಬೂಟೇ ಲಕ್ಷ ಲಕ್ಷದ್ದಾಗಿರುತ್ತದೆ. ಅವರು ತಿರುಗಾಡೋ ಕಾರುಗಳ ಬೆಲೆ, ವಾಸಿಸೋ ಬಂಗಲೆಯ ಬೆಲೆ ಕೋಟಿ ಕೋಟಿಯದ್ದಾಗಿರುತ್ತದೆ. ಎಷ್ಟೋ ಜನ ಟ್ಯಾಕ್ಸನ್ನೇ ಕೋಟಿ ಕೋಟಿ ಕಟ್ತಾರೆ. ಅಂದ ಮೇಲೆ ಅವರು ಎಷ್ಟು ಶ್ರೀಮಂತರಿರಬೇಕಲ್ಲಾ..? ಬರೀ ನಟನೆಯಿಂದಲೇ ಅವರು ಕೋಟಿ ಕೋಟಿ ಸಂಪಾದಿಸುತ್ತಾರಾ..? ಅವರು ವರ್ಷಕ್ಕೆ ನೂರಾರು ಕೋಟಿ ಸಂಪಾದಿಸೋದಾದ್ರೂ ಹೇಗೆ ಅನ್ನೋ ಬಗ್ಗೆ ಹೇಳ್ತೀವಿ ಕೇಳಿ..
ಬಾಲಿವುಡ್ ನಟರು ತಾವು ನಟನೆಯಿಂದ ಗಳಿಸಿದ ದುಡ್ಡನ್ನು ಉದ್ಯಮಕ್ಕೆ ಹಾಕುತ್ತಾರೆ. ಮತ್ತು ಅದರಿಂದ ಮೂೂರು ಪಟ್ಟು ಹೆಚ್ಚು ದುಡ್ಡನ್ನು ಗಳಿಸುತ್ತಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಜಯ್ ದೇವಗನ್, ಹೀಗೆ ಬಾಲಿವುಡ್‌ನ ಹಲವಾರು ಪ್ರಖ್ಯಾತ ನಟರು, ಸೈಡ್ ಬ್ಯುಸಿನೆಸ್ ಮಾಡಿಯೇ ಇಷ್ಟು ಶ್ರೀಮಂತರಾಗಿರೋದು.
ನಟ ಶಾರುಖ್ ಖಾನ್ ರೆಡ್ ಚಿಲ್ಲೀಸ್ ಮಾಲೀಕರಾಗಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್‌ನ ಕೋ-ಓನರ್ ಕೂಡಾ ಆಗಿದ್ದಾರೆ. ಅಲ್ಲದೇ ಕಿಡ್ಜೇನಿಯಾದ 40 ಪರ್ಸೆಂಟ್ ಶೇರ್ ಖರೀದಿಸಿದ್ದಾರೆ. ಇದೆಲ್ಲದರಿಂದ ಶಾರುಖ್‌ಗೆ ಎರಡು ಸಾವಿರ ಕೋಟಿ ಸಂಪಾದನೆಯಾಗುತ್ತದೆ.
ನಟ ಅಮೀರ್ ಖಾನ್ ಕೂಡ ವರ್ಷಕ್ಕೆ ಸಾವಿರ ಕೋಟಿ ಸಂಪಾದಿಸುತ್ತಾರೆ. ಅಮೀರ್ ಖಾನ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಪ್ರೊಡಕ್ಷನ್ ಹೌಸ್ ಕೂಡ ಇದೆ. ಇನ್ನು ಹ್ಯೂಮನ್ ಬೇಯಿಂಗ್ ಅನ್ನೋ ಹೆಸರಿನ ಸ್ವಂತ ಬ್ರ್ಯಾಂಡ್ ಹೊಂದಿರುವ ಸಲ್ಮಾನ್ ಖಾನ್, ಸಲ್ಮಾನ್ ಖಾನ್ ಫಿಲ್ಮ್ಸ್ ಎನ್ನುವ ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದಾರೆ. ಇದರೊಂದಿಗೆ ಯಾತ್ರಾ ಡಾಟ್ ಕಾಮ್‌ನ ಕೋ ಓನರ್ ಆಗಿರುವ ಸಲ್ಮಾನ್, ಸಲ್ಮಾನ್ ಖಾನ್ ಎನ್ನುವ ಟಿವಿ ಟಾನೆಲ್ ಹೊಂದಿದ್ದಾರೆ.
ನಟ ಅಜಯ್ ದೇವಗನ್ ಕೂಡ ತಮ್ಮದೇ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. ಜೊತೆಗೆ ವಿಎಫ್‌ಎಕ್ಸ್ ಎಂಬ ಸ್ಟುಡಿಯೋ ಕೂಡ ಹೊಂದಿದ್ದಾರೆ. ನಟ ಹೃತಿಕ್ ರೋಷನ್ ತಮ್ಮ ಫ್ಯಾಷನ್ ಬ್ರ್ಯಾಂಡ್ ಸ್ಟಾರ್ಟ್ ಮಾಡಿದ್ದು, ಅದರ ಹೆಸರು ಎಚ್.ಆರ್.ಎಕ್ಸ್ ಎಂದು ಇಡಲಾಗಿದೆ. ಈ ಬ್ರ್ಯಾಂಡ್‌ನ ಉಡುಗೆ ತೊಡುಗೆಗಳನ್ನು ಬೇರೆ ಬೇರೆ ದೇಶಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ.
ಇನ್ನು ಜೈಪುರ್ ಕಬ್ಬಡ್ಡಿ ಟೀಮ್ ಆಗಿರುವ ಪಿಂಕ್ ಪ್ಯಾಂಥರ್ಸ್ ಮಾಲೀಕರಾದ ಅಭಿಶೇಕ್ ಬಚ್ಚನ್, ಇನ್ನೊಂದು ಫೂಟ್‌ಬಾಲ್ ಟೀಮ್‌ನ ಕೋ ಓನರ್ ಆಗಿದ್ದಾರೆ. ಇನ್ನು ಕೊನೆಯದಾಗಿ ಕನ್ನಡಿಗರಾಗಿರುವ ಸುನೀಲ್ ಶೆಟ್ಟಿ ಕೂಡ ಒಳ್ಳೆಯ ಉದ್ಯಮಿಯಾಗಿದ್ದು, ಮುಂಬೈನಲ್ಲಿ ಹಲವು ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಎಸ್‌ಟೂ ಅನ್ನೋ ಹೆಸರಿನ ರಿಯಲ್ ಎಸ್ಟೇಟ್ ಕಂಪನಿಯನ್ನ ಕೂಡ ಹೊಂದಿದ್ದಾರೆ ಸುನೀಲ್.