ಡಿ ಬಾಸ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್: ಕಾಡಿನ ಕಥೆ ಹೇಳೋಕ್ಕೆ ಬರ್ತಿದ್ದಾರೆ ದಚ್ಚು..!

ಡಿ ಬಾಸ್ ದರ್ಶನ್ ಪರಿಸರ ಪ್ರೇಮಿ, ಪ್ರಾಣಿ ಪ್ರೇಮಿ. ಅವರು ಆವಾಗಾವಾಗ ಜಂಗಲ್ ಸಫಾರಿಗೆ ಹೋಗ್ತಾರೆ. ಅಲ್ಲಿ ಪ್ರಾಣಿಗಳ ಫೋಟೋಶೂಟ್ ಮಾಡ್ತಾರೆ. ಹಲವು ಪ್ರಾಣಿಗಳನ್ನ ದತ್ತು ತೊಗೊಂಡಿದ್ದಾರೆ, ಅರಣ್ಯ ಇಲಾಖೆ ರಾಯಭಾರಿಯೂ ಆಗಿದ್ದಾರೆ. ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಆದ್ರೆ, ಚಾಲೆಂಜಿಂಗ್ ಸ್ಟಾರ್ ಮುಂದಿನ ಸಿನಿಮಾ ಕೂಡ ಇದಕ್ಕೆ ಸಂಬಂಧಪಟ್ಟಿದ್ದು, ಅನ್ನೋದು ನಿಮಗೆ ಗೊತ್ತಾ..?

ಹೌದು, ಡಾ.ರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಗಂಧದಗುಡಿ ಸ್ಟೈಲ್ ಸ್ಟೋರಿ ಸಿನಿಮಾದಲ್ಲಿ ದರ್ಶನ್ ಅಭಿನಯಿಸಲಿದ್ದಾರೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಈಗಾಗಲೇ ರಾಜೇಂದ್ರ ಸಿಂಗ್ ಬಾಬು ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್‌ನಲ್ಲಿ ವೀರ ಮದಕರಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಇದರ ಶೂಟಿಂಗ್ ನಂತರ ಅರಣ್ಯದ ಮಹತ್ವ ತಿಳಿಸೋ ಸಿನಿಮಾವನ್ನ ನಿರ್ದೇಶನ ಮಾಡಲಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಗಿಡ ಮರಗಳನ್ನ ಕಡಿದು ಹಾಕುತ್ತಿರುವ ಮನುಷ್ಯನ ದುರಾಸೆಗೆ ಪ್ರಾಣಿ- ಪಕ್ಷಿಗಳು ವಿನಾಶದ ಅಂಚಿಗೆ ಬಂದಿದೆ. ಇಂತಹ ವಿಷಯವನ್ನಿಟ್ಟುಕೊಂಡೇ ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಲು ಹೊರಟಿದ್ದಾರೆ.

ಈ ಹಿಂದೆ ರಾಜೇಂದ್ರ ಸಿಂಗ್​ ಬಾಬು ನಾಗರಹೊಳೆ ಮತ್ತು ಸಿಂಹದ ಮರಿ ಸೈನ್ಯದಂತಹ ಅರಣ್ಯ ಪ್ರಾಣಿ, ಪಕ್ಷಿಗಳಿಗೆ ಸಂಬಂಧಪಟ್ಟ ಸಿನಿಮಾ ಮಾಡಿದ್ದರು. ಇದೀಗ ಇಂತಹ ಸಿನಿಮಾವನ್ನ ಮಾಡೋಕ್ಕೆ ಹೊರಟಿರೋ ರಾಜೇಂದ್ರ ಬಾಬು ಪ್ರಾಣಿ ಪ್ರಿಯರಾಗಿರುವ ದರ್ಶನ್‌ರನ್ನ ತಮ್ಮ ಸಿನಿಮಾಗೆ ಸೆಲೆಕ್ಟ್ ಮಾಡಿದ್ದಾರೆ.

ಲಾಕ್‌ಡೌನ್ ವೇಳೆ ಸಮಯ ಸಿಕ್ಕಾಗ ರಾಜೇಂದ್ರ ಬಾಬು ಸ್ಟೋರಿ ಮಾಡಿದ್ದರಂತೆ. ಆಫ್ರಿಕಾದ ದಟ್ಟ ಕಾಡಿನಲ್ಲಿ ಶೂಟಿಂಗ್ ನಡೆಯಲಿದ್ದು, ಪ್ಯಾನ್ ಇಂಡಿಯನ್ ಸಿನಿಮಾ ಮಾಡುವ ಆಲೋಚನೆ ಇದೆ.

https://youtu.be/nwms0yDZvHc

About The Author