Sunday, September 8, 2024

Latest Posts

ಎ. ಚೋಳೇನಹಳ್ಳಿ ಗ್ರಾಮ ಪಂಚಾಯತಿ ಉಪಚುನಾವಣೆಯಲ್ಲಿ ವಿಜೇತರಾದ ಸಿ.ಎನ್ ಕುಮಾರ್

- Advertisement -

ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿಯ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎ.ಚೋಳೇನಹಳ್ಳಿ ಗ್ರಾಮದ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಸಿ ಎನ್ ಕುಮಾರ್ ಜಯಗಳಿಸಿದ್ದಾರೆ.

ಸೆಪ್ಟಂಬರ್ 28ರಂದು ನಡೆದ ಗ್ರಾಮ ಪಂಚಾಯತಿ ಉಪಚುನಾವಣೆ ಮತದಾನ ನಡೆದಿತ್ತು, ಈ ದಿನ ಬೆಳಿಗ್ಗೆ 8ಗಂಟೆಗೆ ಪ್ರಾರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ-299 ಮತಗಳನ್ನು ಗಳಿಸಿದ್ದಾರೆ, ಅದೇ ರೀತಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಸಿ.ಎನ್ ಕುಮಾರ್ -641 ಮತಗಳನ್ನು ಪಡೆದಿದ್ದಾರೆ, 9 ಮತಗಳು ತಿರಸ್ಕೃತಗೊಂಡಿವೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾದ ಸಿ.ಎನ್.ಕುಮಾರ್ ಅವರು 342 ಮತಗಳ ಅಂತರದಿಂದ ವಿಜಯಶೀಲರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಣೆ ಮಾಡಿದರು.

ಮನೆ ಹಂಚಿಕೆ ಲೋಪ: ಕ್ರಮಕ್ಕೆ ಒತ್ತಾಯ ಮಾಡಿದ ಮಾಜಿ ಶಾಸಕ ಎಂ.ಎ ಗೋಪಾಲಸ್ವಾಮಿ

ಇದೇ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿತ ಮುಖಂಡರು ಮತ್ತು ಕಾರ್ಯಕರ್ತರುಗಳು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು, ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎ ಚೋಳೆನಹಳ್ಳಿ ಉಪಚುನಾವಣೆಯಲ್ಲಿ ವಿಜಯಶಾಲಿಯಾದ ಸಿ ಆರ್ ಕುಮಾರ್ ಅವರನ್ನು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕರಾದ ಸಿ.ಎನ್ ಪುಟ್ಟಸ್ವಾಮಿಗೌಡರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಸಿ.ಕೆ. ಕುಸುಮರಾಣಿರವರು ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿ.ಎನ್.ಪುಟ್ಟಸ್ವಾಮಿಗೌಡರು ಚೋಳನಹಳ್ಳಿ ಗ್ರಾಮದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿದ ಸಮಸ್ತ ಮತದಾರರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು, ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ರೀಮತಿ ಕುಸುಮ ಬಾಲಕೃಷ್ಣ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಸಿ.ಎನ್ ಕುಮಾರ್ ಅವರು ಗ್ರಾಮದ ಎಲ್ಲ ಮುಖಂಡರು ಮತ್ತು ಮತದಾರರ ಸಲಹೆ, ಸಹಕಾರವನ್ನು ಪಡೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಶುಭ ಹಾರೈಸಿದರು.

‘ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರಿಗೆ ನೀಡಿದ ಭರವಸೆ ಈಡೇರಿಸಲಿ, ಇಲ್ಲವಾದಲ್ಲಿ ಪ್ರತಿಭಟನೆ ಗ್ಯಾರಂಟಿ’

ಇದೇ ಸಂದರ್ಭದಲ್ಲಿ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ.ಎನ್ ಪುಟ್ಟಸ್ವಾಮಿಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕುಸುಮ ಬಾಲಕೃಷ್ಣ,ನೂತನ ಗ್ರಾಮ ಪಂಚಾಯಿತಿ ಸದಸ್ಯ ಸಿ.ಎನ್ ಕುಮಾರ್, ಮುಖಂಡರಾದ ಕುಮಾರ್, ಸಾಗರ್,ನಿಂಗಣ್ಣ, ಸಿ.ಕೆ.ದೇವೇಗೌಡ, ಸಿ.ಎನ್.ಮಂಜುನಾಥ್, ಗನ್ನಿಸತೀಶ್,ಚೋಟು ಮಂಜು, ಅರುಣ್, ಸೇರಿದಂತೆ ಇತರರು ಹಾಜರಿದ್ದರು.

- Advertisement -

Latest Posts

Don't Miss