Thursday, June 19, 2025

Latest Posts

ಎರಡೇ ಗಂಟೆಯಲ್ಲಿ 3 ಲಕ್ಷ ವೀವ್ಸ್ ಪಡೆದ ಜೇಮ್ಸ್ ಸಿನಿಮಾ ಟೀಸರ್..

- Advertisement -

ಪವರ್ ಸ್ಟಾರ್ ಅಪ್ಪು ಅಭಿನಯದ ಕೊನೆಯ ಸಿನಿಮಾ ಆದ ಜೇಮ್ಸ್ ಸಿನಿಮಾ ಟೀಸರ್, ಅಪ್ಲೋಡ್ ಆದ ಎರಡೇ ಗಂಟೆಯಲ್ಲಿ 3 ಲಕ್ಷ ವೀವ್ಸ್ ಪಡೆದಿದೆ. ಈ ಸಿನಿಮಾದಲ್ಲಿ ಅಪ್ಪು ಕ್ಯಾರೆಕ್ಟರ್‌ಗೆ ಶಿವಣ್ಣ ವಾಯ್ಸ್ ನೀಡಿದ್ದಾರೆ. ಮಾರ್ಚ್ 17ರಂದು ಪ್ರಪಂಚದಾದ್ಯಂತ ರಿಲೀಸ್ ಆಗಲಿರುವ ಈ ಸಿನಿಮಾ ಪಂಚ ಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯನ್ ಸಿನಿಮಾ ಎನ್ನಿಸಿಕೊಳ್ಳಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಈ ಚಿತ್ರದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಮಿಂಚಿದ್ದು, ಚಿತ್ರದಲ್ಲಿರುವ ಡೈಲಾಗ್ಸ್ ಎಲ್ಲರ ಗಮನ ಸೆಳೆದಿದೆ. ವಿಲನ್, ನನ್ ಜೊತೆ ಕಾಂಪಿಟ್ ಮಾಡಿರೋರ್ಯಾರು ಗೆದ್ದಿರೋ ರೆಕಾರ್ಡ್ಸೇ ಇಲ್ಲಾ ಅನ್ನೋ ಡೈಲಾಗ್‌ಗೆ, ನನಗೆ ಮೊದ್ಲಿಂದಾನೂ ರೆಕಾರ್ಡ್ಸ್ ಬ್ರೇಕ್ ಮಾಡಿ ಅಭ್ಯಾಸಾ ಅನ್ನೋ ಶಿವಣ್ಣನ ಡೈಲಾಗ್ ಅಭಿಮಾನಿಗಳಿಗೆ ಸಖತ್ ಇಷ್ಟಾ ಆಗಿದೆ. ಈಗ ಎಲ್ಲೆಲ್ಲೂ ಈ ಡೈಲಾಗ್‌ದೇ ಅಬ್ಬರ. ಟೀಸರ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಣ್ಣು ಮಿಟುಕಿಸೋಕ್ಕೂ ಆಗದಷ್ಟು ಚೆನ್ನಾಗಿದೆ ಟೀಸರ್ ಎಂದಿದ್ದಾರೆ. ಆದರೆ ಅದರ ಜೊತೆ ಇದು ಅಪ್ಪು ಅವರ ಕೊನೆಯ ಸಿನಿಮಾ. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕೂಡ ಬೇಸರ ವ್ಯಕ್ತ ಪಡಿಸಿದ್ದಾರೆ.

ಕಿಶೋರ್ ಪ್ರೊಡಕ್ಷನ್ಸ್ ಬ್ಯಾನರ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನ ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ, ಡಾ.ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕೂಡ ನಟಿಸಿರುವುದು ವಿಶೇಷ. ಇದೇ ಮೊದಲ ಬಾರಿ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಇವರಿಗೆ ಪ್ರಿಯಾಾ ಆನಂದ್, ಶರತ್ ಕುಮಾರ್, ಶ್ರೀಕಾಂತ್ ಮೆಕಾ, ಆದಿತ್ಯ ಮೆನನ್, ಮುಖೇಶ್ ರಿಷಿ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಚಿಕ್ಕಣ್ಣ, ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್, ಕೇತನ್ ಸೇರಿ ಹಲವು ಕಲಾವಿದರು ಸಾಥ್ ಕೊಟ್ಟಿದ್ದಾರೆ.

- Advertisement -

Latest Posts

Don't Miss