ಕಚ್ಚಾಬಾದಾಮ್ ಎಂಬ ಹಾಡಿನ ಮೂಲಕ ಸಖತ್ ಫೇಮಸ್ ಆಗಿದ್ದ ಗಾಯಕ ಭುವನ್ ಬಡ್ಯಾಕರ್ ಈಗ ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಶೋ ಕೊಡುವ ಮಟ್ಟಿಗೆ ಬೆಳೆದಿದ್ದಾರೆ. ಕಚ್ಚಾ ಬಾದಾಮ್ ಎನ್ನುವ ಹಾಡು, ಶೇಂಗಾ ಮಾರುವುದರಿಂದ ಹಿಡಿದು, ಹೀಗೆ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಶೋ ಕೊಡುವವರೆಗೂ ತಂದು ನಿಲ್ಲಿಸಿದೆ.
ಇನ್‌ಸ್ಟಾಗ್ರಾಮ್ ಓಪೆನ್ ಮಾಡಿದ್ರೆ ಹೆಚ್ಚು ಕೇಳುವ ಹಾಡೇ ಕಚ್ಚಾ ಬಾದಾಮ್. ಸಾಮಾನ್ಯರಿಂದ ಹಿಡಿದು, ಬೇರೆ ಬೇರೆ ಭಾಷೆಯ ಕಲಾವಿದರು, ನಟ ನಟಿಯರು ಕೂಡ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಒಂದು ತಿಂಗಳಲ್ಲಿ ಭುವನ್ ಲಕ್ ಚೇಂಜ್ ಆಗಿದೆ. ಕಚ್ಚಾ ಬಾದಾಮ್ ಆಲ್ಬಂ ಸಾಂಗ್ ಮತ್ತು ಕಚ್ಚಾ ಬಾದಾಮ್ ರಿಮಿಕ್ಸ್‌ನಲ್ಲಿ ಹಾಡು ಹಾಡಿ, ಸ್ಟೆಪ್ ಹಾಕಿದ್ದ ಭುವನ್, ಈಗ ಹೊಟೇಲ್‌ನಲ್ಲಿ ಸೂಟು- ಬೂಟು ಹಾಕಿಕೊಂಡು ಹಾಡು ಹಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೊಲ್ಕತ್ತಾದ ಆ ಹೊಟೇಲ್‌ಗೆ ಬಂದ ಶ್ರೀಮಂತರೆಲ್ಲ ಭುವನ್ ಜೊತೆ ಸೆಲ್ಫಿ ತೆಗೆದುಕೊಂಡರು. ಸಿಂಪಲ್ ಭುವನ್ ಸೂಟ್‌ನಲ್ಲಿ ಮಿಂಚುತ್ತಿದ್ದರೂ, ತಮ್ಮ ಮುಗ್ಧ ನಗುವಿಟ್ಟುಕೊಂಡೇ ಸೆಲ್ಪಿಗೆ ಪೋಸ್ ಕೊಟ್ಟರು. ಇನ್ನು ಭುವನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಾನು ಹಾಡಿದ ಹಾಡು, ಇಷ್ಟೆಲ್ಲ ವೈರಲ್ ಆಗುತ್ತದೆ ಅಂತಾ ನಾನು ಅಂದುಕೊಂಡಿರಲಿಲ್ಲ. ನಾನು ತುಂಬ ದೂರದಿಂದ ಈ ಹೊಟೇಲ್‌ನಲ್ಲಿ ಹಾಡೋಕ್ಕೆ ಬಂದೆ. ಹಲವರು ನನ್ನನ್ನು ಭೇಟಿ ಮಾಡಿದರೂ, ಅದರಲ್ಲಿ ನಟ ನಟಿಯರೂ ಇದ್ದರು. ಅವರೆಲ್ಲ ನನ್ನೊಂದಿಗೆ ಸೆಲ್ಫಿ ತೆಗೆದುಕೊಂಡರು, ನನಗೆ ಖುಷಿಯಾಯಿತು ಎಂದು ಹೇಳಿದ್ದಾರೆ.