ಮಂಡ್ಯ: ರಸ್ತೆಗೆ ಹಾಕಿದ್ದ ಡಾಂಬರು ಎರಡೇ ದಿನಕ್ಕೆ ಕಿತ್ತುಬಂದ ಘಟನೆ ಮಂಡ್ಯದ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನಾಯನಹಳ್ಳಿಯಲ್ಲಿ ಎರಡು ದಿನದ ಹಿಂದೆ ರಸ್ತೆಗೆ ಡಾಂಬರು ಹಾಕಲಾಗಿತ್ತು. ಆದ್ರೆ ಅದು ಕಿತ್ತುಬಂದಿದ್ದು, ಕಳಪೆ ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವೆಂಬರ್ 11ರಂದು ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದ್ರೆ ಆ ಕಾಮಗಾರಿ ಎಷ್ಟು ಕಳಪೆಯಾಗಿತ್ತು ಎಂದು ಗ್ರಾಮಸ್ಥರು ತೋರಿಸಿದ್ದಾರೆ. ಗುತ್ತಿಗೆದಾರರು ಅಭಿವೃದ್ಧಿ ಹೆಸರಲ್ಲಿ ಕಳಪೆ ಕಾಮಗಾರಿ ನಡೆಸಿದ್ದು, ಗುತ್ತಿಗೆದಾರನ ಜೊತೆ ಅಧಿಕಾರಿಗಳೂ ಶಾಮೀಲಾಗಿದ್ದಾರೆಂದು, ಕಳಪೆ ಕಾಮಗಾರಿ ನಡೆಸಿರೋ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಗೋಪುರದ ರೀತಿ ಕಾಣುವುದೆಲ್ಲ ಸಾಬ್ರುದು ಅನ್ನೊದಾದ್ರೆ ನಾವ್ ಏನ್ ಮಾಡೊದು..?’
‘ನನಗೆ ಹೆಚ್ಚು ವರ್ಷ ಬದುಕಬೇಕು, ಆದರೆ ಎಷ್ಟು ವರ್ಷ ಬದುಕಿರುತ್ತೇನೋ ಗೊತ್ತಿಲ್ಲ’