- Advertisement -
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಜಾಲ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ, ಸ್ಟಾರ್ ನಟಿಯರೇ ಗಾಂಜಾ ಮತ್ತಲ್ಲಿ ತೇಲಾಡಿರೋ ಮಾಹಿತಿ ಕಲೆ ಹಾಕಿರೋ ಸಿಸಿಬಿ ಈಗಾಗಲೇ ಅನೇಕರನ್ನ ವಶಕ್ಕೆ ಪಡೆದು ಡ್ರಿಲ್ ಮಾಡ್ತಿದೆ. ಈ ಸಾಲಿಗೆ ಸ್ಯಾಂಡಲ್ವುಡ್ ತುಪ್ಪದ ಬೆಡಗಿ ರಾಗಿಣಿ ಸಹ ಸೇರಿದ್ದಾರೆ. ಇವರ ಗಾಂಜಾ ನಶೆಯ ಕತೆ ಬಲು ರೋಚಕವಾಗಿದೆ.
ತಂದೆಯ ಸಾವಿನ ಬಳಿಕ ಅನುಕಂಪ ಆಧಾರದಲ್ಲಿ ಸಾರಿಗೆ ಇಲಾಖೆಯಲ್ಲಿ ಜಾಬ್ ಗಿಟ್ಟಿಸಿಕೊಂಡಿದ್ದ ರವಿ ನಟಿ ರಾಗಿಣಿ ಆಪ್ತನಾಗಿದ್ದ. ಡ್ರಗ್ ಪೆಡ್ಲರ್ಗಳ ಜತೆ ಲಿಂಕ್ ಹೊಂದಿದ್ದ ರವಿ ಸಿಸಿಬಿ ವಿಚಾರಣೆ ವೇಳೆ ನಟಿ ರಾಗಿಣಿ ಗಾಂಜಾ ಕತೆಯನ್ನ ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ.
ರವಿ ನೀಡಿರುವ ಮಾಹಿತಿ ಹಾಗೂ ವಿವಿಧ ಸಾಕ್ಷ್ಯಗಳನ್ನ ಆಧರಿಸಿರೋ ಸಿಸಿಬಿ ನಟಿ ರಾಗಿಣಿಯನ್ನ ವಶಕ್ಕೆ ಪಡೆದಿದೆ.
ನಾಗೇಂದ್ರ ಆರೂಡಿ ಕರ್ನಾಟಕ ಟಿವಿ ಬೆಂಗಳೂರು
- Advertisement -