ನಟ ಶಶಿಕುಮಾರ್ ಪುತ್ರ ಸುಪ್ರೀಂ ಅವರ ಸೀತಾಯಣ ಸಿನಿಮಾ, ಏನಿದರ ಸ್ಪೆಷಲ್..?

ಸುಪ್ರೀಂ ಹೀರೋ ಶಶಿಕುಮಾರ್ ಮಗ ಯಂಗ್ ಸುಪ್ರೀಂ ಅಕ್ಷಿತ್ ಶಶಿಕುಮಾರ್ ಅವರನ್ನು ನಾಯಕ ನಟನಾಗಿ ಪರಿಚಯಿಸುತ್ತ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣ ಹೊಂದಿರುವ ಸೀತಾಯಣ ಚಿತ್ರ ಸಂಪೂರ್ಣ ಬಿಡುಗಡೆ ತಯಾರಿಯಲ್ಲಿದೆ.

ಡಬ್ಬಿಂಗ್ ರಿರೆಕಾರ್ಡಿಂಗ್ ಕೆಲಸಗಳನ್ನ ಪೂರ್ತಿಯಾಗಿ ಮುಗಿಸಿಕೊಂಡು ಈ ಚಿತ್ರಕ್ಕೆ ಸಂಬಂಧಪಟ್ಟ ಡಿಟಿಎಸ್‌ ಫೈನಲ್ ಮಿಕ್ಸಿಂಗ್ ಕೆಲಸಗಳು ಪ್ರಸ್ತುತ ರಾಜೇಶ್ ರಾಮ್‌ನಾಥ್ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ರೋಹನ್ ಭಾರದ್ವಾಜ್ ಸಮರ್ಪಿಸುವ ಕಾಲರ್ ಕ್ಲೌಡ್ ಎಂಟರ್‌ಟೇನ್‌ಮೆಂಟ್ಸ್‌ ವತಿಯಿಂದ ಲಲಿತಾ ರಾಜ್ಯಲಕ್ಷ್ಮೀ ನಿರ್ಮಿಸುತ್ತಿರುವ ಸೀತಾಯಣ ಚಿತ್ರವು ಸುನೀತವಾದ ಭಾವನೆಗಳಿಗೆ ಅರ್ಥವನ್ನು ಹೇಳುತ್ತ, ಎದುರಾಗುವ ಸನ್ನಿವೇಶ ಕಥೆಯನ್ನ ಯಾವ ತಿರುವಿಗೆ ಒಳಪಡಿಸುತ್ತೆ..? ನಾಯಕನು ಆ ಸನ್ನಿವೇಷವನ್ನು ಹೇಗೆ ಎದುರಿಸುತ್ತಾನೆ. ಯಾರ ವಿರುದ್ಧ ನಾಯಕನ ಹೋರಾಟ…? ಅನ್ನೋ ಅಂಶಗಳಿಂದ ರೂಪುಗೊಂಡಿದೆ.

ಟೀಸರ್, ಟ್ರೇಲರ್ ಮತ್ತು ಲಿರಿಕಲ್ ವೀಡಿಯೋ ಸಾಂಗ್‌ಗಳನ್ನ ಅತೀ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆಂದು ನಿರ್ದೇಶಕರು ಹೇಳಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಿಸಿರುವ ಈ ಚಿತ್ರ, ತಮಿಳಲ್ಲೂ ಸಹ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. cದುವೆ ಆಹ್ವಾನ ಪತ್ರಿಕೆಯಲ್ಲಿ ಬರುವ ಶ್ಲೋಕವನ್ನ ಮೊದಲ ಬಾರಿಗೆ ಹಾಡಿನ ರೂಪದಲ್ಲಿ ತೆರೆಗೆ ತರಲಾಗಿದೆ. ಅಲ್ಲದೇ ಈ ಚಿತ್ರದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಶ್ವೇತಾ ಮೋಹನ್ ಹಾಡಿದ್ದಾರೆ. ತಮಿಳಿನಲ್ಲಿ ತಳಪತಿ ವಿಜಯ್ ಅವರ ಕಸೀನ್ ಪಲ್ಲವಿ ಸುರೇಂದರ್ ಹಾಡಿದ್ದಾರೆ.

63 ದಿನಗಳ ಕಾಲ ಬ್ಯಾಂಕಾಕ್ , ಬೆಂಗಳೂರು, ಹೈದರಾಬಾದ್, ಮಂಗಳೂರು ವೈಜಾಗ್ ಮತ್ತು ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಅಕ್ಷಿತ್ ಶಶಿಕುಮಾರ್‌ಗೆ ಜೋಡಿಯಾಗಿ ಅನಹಿತ ಭೂಷಣ್ ನಟಿಸಿದ್ದಾರೆ. ವಿಕ್ರಮ್ ಶರ್ಮಾ, ಅಜಯ್ ಜೋಶ್, ಕಾಮಿಡಿ ಕಿಲಾಡಿ ಹಿತೇಶ್, ಶರ್ಮಿತ್ ಗೌಡ, ಮೇಘನಾ ಗೌಡ ನಟಿಸಿದ್ದಾರೆ.

ರೋಹನ್ ಭಾರದ್ವಾಜ್ ಡೈರೆಕ್ಟ್ ಮಾಡಿರುವ ಈ ಚಿತ್ರದಲ್ಲಿ, ಪದ್ಮನಾಭ್ ಭಾರದ್ವಾಜ್ ಸಂಗೀತ ನಿರ್ದೇಶಿಸಿದ್ದಾರೆ. ನಿರ್ಮಾಪಕರು ಲಲಿತಾ ರಾಜ್ಯಲಕ್ಷ್ಮೀಯಾಗಿದ್ದು, ಪ್ರಭಾಕರ್ ಅರಿಪಾಕ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ದುರ್ಗಾಪ್ರಸಾದ್ ಕೊಲ್ಲಿ ಸಿನಿಮಾಟೋಗ್ರಫಿ ಇದ್ದು, ಪ್ರವೀಣ್ ಪೋಡಿ ಸಿನಿಮಾ ಎಡಿಟಿಂಗ್ ಮಾಡಿದ್ದಾರೆ. ಕವಿರಾಜ್, ಗೌಸಪೀರ್ ಸಾಹಿತ್ಯವಿದೆ. ರಿಯಲ್ ಸತೀಶ್ ಫೈಟಿಂಗ್ ಮಾಸ್ಟರ್ ಆದ್ರೆ, ಅನೀಶ್ ಕೋರಿಯೋಗ್ರಫಿ ಮಾಡಿದ್ದಾರೆ.
ಪ್ರಿಯಾಂಕಾ, ಕರ್ನಾಟಕ ಟಿವಿ, ಬೆಂಗಳೂರು

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author