ಸಂಯುಕ್ತಾ ಹೆಗಡೆ.. ಕಿರಿಕ್ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈ ಚೆಲುವೆ, ತಮ್ಮ ಬೋಲ್ಡ್‌ನೆಸ್‌ನಿಂದಲೇ ಮನೆಮಾತಾಗಿದ್ದರು. ಅಲ್ಲದೇ, ಕೆಲ ಕಡೆ ಕಿರಿಕ್ ಮಾಡಿಯೂ ಟ್ರೋಲ್ ಆಗಿದ್ದರು.

ರೋಡೀಸ್‌ನಲ್ಲಿ ಭಾಗವಹಿಸಿದ್ದ ಸಂಯುಕ್ತಾ, ತಮ್ಮ ಬಾಯ್‌ಫ್ರೆಂಡ್ ಜೊತೆ ಲಿಪ್ ಕಿಸ್ ಮಾಡಿದ್ದು, ಬೀಚ್ ಬಳಿ ಬಿಕಿನಿ ಹಾಕಿ ಪೋಸ್ ಕೊಟ್ಟಿದ್ದನ್ನ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದಾಗ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ತಮ್ಮ ಫೋಟೋ ಎಷ್ಟೇ ಟ್ರೋಲ್ ಆದ್ರೂ, ಡೋಂಟ್ ಕೇರ್ ಅನ್ನದ ಸಂಯುಕ್ತಾ, ತಮ್ಮಿಷ್ಟಂತೆ ಇದ್ದಾರೆ. ವಿಜಯ್ ದಳಪತಿ ಹುಟ್ಟುಹಬ್ಬಕ್ಕೆ ಡಿಫ್ರೆಂಟ್ ಆಗಿ ವಿಶ್ ಮಾಡಿರುವ ಸಂಯುಕ್ತಾ, ಹುಲಾಹೂಪ್ ಹಿಡಿದು ಡಾನ್ಸ್ ಮಾಡಿ ವಿಶ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಸಂಯುಕ್ತಾ ವಿಜಯ್ ನಟಿಸಿರುವ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಈಕೆಯ ಸ್ಟೆಪ್‌ಗೆ ಫ್ಯಾನ್ಸ್ ಫುಲ್ ಫೀದಾ ಆಗಿದ್ದು, ಇನ್‌ಸ್ಟಾದಲ್ಲಿ ಬೆಸ್ಟ್ ಕಮೆಂಟ್ಸ್ ಕೊಟ್ಟಿದ್ದಾರೆ. ಸ್ವಲ್ಪ ದಿನ ಸಿನಿಇಂಡಸ್ಟ್ರಿಯಿಂದ ಗ್ಯಾಪ್ ತೆಗೆದುಕೊಂಡ ಸಂಯುಕ್ತಾ, ಮತ್ತೆ ತೆರೆ ಮೇಲೆ ಬರೋಕ್ಕೆ ರೆಡಿಯಾಗಿದ್ದಾರೆ. ಇತ್ತೀಚೆಗೆ ಹೆವಿ ವರ್ಕೌಟ್ ಮಾಡುತ್ತಿರುವ ಸಂಯುಕ್ತಾ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ.


