News: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಈ ಮೂಲಕ ಆಭರಣ ಪ್ರಿಯರಿಗೆ ಶಾಕ್ ನೀಡುವ ವಿಚಾರ ಹೊರಬಿದ್ದಿದೆ. ಇನ್ನೂ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಒಂದೇ ದಿನದಲ್ಲಿ 10 ಗ್ರಾಂ ಶುದ್ಧ ಚಿನ್ನವು ಬರೊಬ್ಬರಿ 6, 250 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಹೀಗಾಗಿ ಅದರ ಬೆಲೆ ಒಟ್ಟು 96,450 ರೂಪಾಯಿಗಳಿಗೆ ತಲುಪಿದೆ. ಪ್ರಮುಖವಾಗಿ ಆಭರಣ ತಯಾರಕರು ಹಾಗೂ ದಾಸ್ತಾನುದಾರರ ಅಧಿಕ ಬೇಡಿಕೆಯ ಹಿನ್ನೆಲೆ ಚಿನ್ನದ ದರದಲ್ಲಿ ಹೆಚ್ಚಳವಾಗಿದೆ.
ಅಲ್ಲದೆ ಇದೊಂದು ಸಾರ್ವಕಾಲಿಕ ದರ ಏರಿಕೆಯ ದಾಖಲೆಯಾಗಿದೆ. ಇನ್ನೂ ಸತತ 4 ದಿನಗಳ ಕಾಲ ಕುಸಿತ ಕಂಡಿತ್ತು. ಕಳೆದ ಬುಧವಾರದ ಅಂತ್ಯಕ್ಕೆ 90, 200 ರೂಪಾಯಿಗಳಷ್ಟಾಗಿತ್ತು. ಅಂದಹಾಗೆ ಚೀನಾ ಹಾಗೂ ಅಮೆರಿಕ ದೇಶಗಳ ನಡುವೆ ಆರಂಭವಾಗಿರುವ ತೆರಿಗೆ ಸಮರದಿಂದ ಜಾಗತಿಕ ಮಾರುಕಟ್ಟೆ ಸುರಕ್ಷಿತವಲ್ಲ ಎಂದು ಆಭರಣ ತಯಾರಕರು ಅರಿತಿರುವ ಕಾರಣ ದಾಸ್ತಾನುದಾರರು ಅಧಿಕ ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ಉಭಯ ದೇಶಗಳ ನಡುವಿನ ಸುಂಕ ಸಮರದ ಹಿನ್ನೆಲೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ.
ಬೆಳ್ಳಿ ಎಷ್ಟು..?
ದೆಹಲಿಯಲ್ಲಿ ಶುಕ್ರವಾರ 99.9 ಶುದ್ಧತೆಯ ಚಿನ್ನ, 10 ಗ್ರಾಂಗೆ 6250 ಏರಿಕೆಯೊಂದಿಗೆ 96,450 ರು.ಗೆ ತಲುಪಿದೆ. ಇದಕ್ಕೂ ಮುನ್ನ 90,200 ರೂಪಾಯಿ ಇತ್ತು. ಇನ್ನೂ ಬೆಳ್ಳಿಯ ಬೆಲೆಯಲ್ಲೂ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 2, 300 ರೂಪಾಯಿಗಳಷ್ಟು ಏರಿಕೆಯಾಗಿದ್ದು, 95,500 ರೂಪಾಯಿಗೆ ತಲುಪಿತ್ತು.
ಎಲ್ಲೆಲ್ಲೆ ಎಷ್ಟಿದೆ ಚಿನ್ನದ ಬೆಲೆ..?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯನ್ನು ನೋಡುವುದಾದರೆ ಚೆನ್ನೈನಲ್ಲಿ 87,460 ರೂಪಾಯಿ, ಮುಂಬೈನಲ್ಲಿ 87,460 ರೂಪಾಯಿ, ದೆಹಲಿಯಲ್ಲಿ 87,610 ರೂಪಾಯಿ, ಕೋಲ್ಕತ್ತಾದಲ್ಲಿ 87, 460 ರೂಪಾಯಿ, ಬೆಂಗಳೂರಲ್ಲಿ 87,460 ರೂಪಾಯಿ, ಹೈದರಾಬಾದ್‌ನಲ್ಲಿ 87,460 ರೂಪಾಯಿ, ಪುಣೆಯಲ್ಲಿ 87,460 ರೂಪಾಯಿ, ಕೇರಳದಲ್ಲಿ 87,460 ರೂಪಾಯಿ, ಅಹಮದಾಬಾದ್‌ನಲ್ಲಿ 87, 460 ರೂಪಾಯಿ ಹಾಗೂ ವಡೋದರಾದಲ್ಲಿ 87, 460 ರೂಪಾಯಿಗಳಷ್ಟಿದೆ.
ಮಹಿಳೆಯರಿಗೆ ಚಿನ್ನದ ಬೆಲೆ ಖುಷಿ ನೀಡುತ್ತಿಲ್ಲ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಏರಿಕೆ ಕಂಡಿದೆ. ಇಂದು ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ಬೆಲೆ ಬಿರುಗಾಳಿಯಂತೆಯೇ ವೇಗವಾಗಿ ಏರಿಕೆಯಾಗಿದ್ದು, ಖರೀದಿದಾರರಲ್ಲಿ ಆತಂಕದ ಮೋಡ ಕವಿದಂತಾಗಿದೆ. 22 ಕ್ಯಾರೆಟ್‌ಗೆ 2,500 ರೂಪಾಯಿ ಹೆಚ್ಚಳವಾಗಿದೆ, 24 ಕ್ಯಾರೆಟ್‌ಗೆ 2,700 ರೂಪಾಯಿ ಮತ್ತು 18 ರೂಪಾಯಿ ಕ್ಯಾರೆಟ್‌ಗೆ 2,100 ರೂಪಾಯಿಗೆ ಬಂಗಾರದ ದರಗಳಲ್ಲಿ ನಿರಂತರ ಹೆಚ್ಚಳ ಕಂಡುಬಂದಿದೆ. ಇಷ್ಟು ದಿನಗಳ ಕಾಲ ಅತ್ಯಂತ ಸಂತಸದಿಂದ ಆಭರಣದ ಅಂಗಡಿಗಳತ್ತ ತೆರಳುತ್ತಿದ್ದ ಆಭರಣ ಪ್ರಿಯರು, ಇದೀಗ ಚಿಂತಿಸುತ್ತ ಅಂಗಡಿಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.