Saturday, April 12, 2025

Latest Posts

ಯಶ್​ ಲಾಕೆಟ್​ ಮೇಲೆ ಅಭಿಮಾನಿಗಳ ಕಣ್ಣು!

- Advertisement -

ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಹಾಗೆ ನಮ್ಮೆಲ್ಲರ ಪ್ರಿನ್ಸೆಸ್​ ರಾಧಿಕಾ ಪಂಡಿತ್​, ರಾಕಿಂಗ್​ ಸ್ಟಾರ್​ ಯಶ್​ ದಂಪತಿ ಕೂಡ ಅಷ್ಟೇ ವಿಜೃಂಭಣೆಯಿಂದ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಹಬ್ಬದ ಫೋಟೋಗಳನ್ನ ರಾಧಿಕಾ ಪಂಡಿತ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಫೋಟೊಗಳಲ್ಲಿ ರಾಕಿಂಗ್ ಜೋಡಿಯನ್ನು ಜೋಡಿ ನೋಡಿ ಫ್ಯಾನ್ಸ್ ಲೈಕ್ಸ್, ಕಾಮೆಂಟ್ಸ್​ಗಳ ಸುರಿಮಳೆ ಸುರಿಸಿದ್ದಾರೆ.

ನಟಿ ರಾಧಿಕಾ ಸೀರೆಯಲ್ಲಿ ಟ್ರೆಡಿಷನಲ್​​ ಲುಕ್​ನಲ್ಲಿ ಬ್ಯೂಟಿಫುಲ್​ ಆಗಿ ಕಾಣಿಸುತ್ತಿದ್ದರೆ, ಯಶ್ ಶರ್ಟ್, ಪಂಚೆ-ಶಲ್ಯ ತೊಟ್ಟು ಮಿಂಚಿದ್ದಾರೆ. ‘ಟಾಕ್ಸಿಕ್’ ಸಿನಿಮಾಗಾಗಿ, ಯಶ್ ಹೊಸ ಹೇರ್‌ಸ್ಟೈಲ್ ಫೋಟೋದಲ್ಲಿ ಹೈಲೆಟ್ ಆಗಿದ್ದು, ಮಕ್ಕಳಾದ ಐರಾ, ಯಥರ್ವ್​ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರಾಜಾ ರಾಣಿಯಂತೆ ಕಾಣಿಸುತ್ತಿರುವ ಈ ಜೋಡಿಗೆ ಅಭಿಮಾನಿಗಳು ಮೆಚ್ಚುಗೆಯ ಕಮೆಂಟ್​ಗಳನ್ನ ಮಾಡುತ್ತಿದ್ದಾರೆ. ಇನ್ನು ನಿನ್ನೆಯಷ್ಟೇ ತಮ್ಮ ಸಿನಿಮಾ ಕೆಜಿಎಫ್​2 ನ್ಯಾಷನಲ್​ ಅವಾರ್ಡ್​ ಬಂದಿತ್ತು. ಹಬ್ಬದ ಸಂಭ್ರಮದ ಜೊತೆಗೆ ತಮ್ಮ ಸಿನಿಮಾಗೆ ನ್ಯಾಷನಲ್​ ಅವಾರ್ಡ್​ ಬಂದ ಖುಷಿಯಲ್ಲಿದ್ದಾರೆ ಯಶ್. ಇದೀಗ ಸೋಶಿಯಲ್​ ಮೀಡಿಯಾದಲ್ಲಿ, ಕನ್ನಡ ಚಿತ್ರರಂಕ್ಕೆ ನ್ಯಾಷನಲ್​ ಅವಾರ್ಡ್​ ಸಿಕ್ಕಿದರ ಬಗ್ಗೆ ಚರ್ಚೆಯಾಗುತ್ತಿದೆ. ಅದರ ಜೊತೆ ಮತ್ತೊಂದು ವಿಷ್ಯ ಏನಪ್ಪಾ ಅಂದರೆ, ರಾಧಿಕಾ ಶೇರ್​ ಮಾಡಿರೋ ಫೋಟೋಗಳಲ್ಲಿ ಯಶ್​ ಕೊರಳಿಗೆ ಧರಿಸಿರುವ ಲಾಕೆಟ್​.

ಕೆಲವರು ರಾಧಿಕಾ ಧರಿಸಿರುವ ಸೀರೆ, ಒಡವೆ, ಯಶ್​ ಹೇರ್​ ಸ್ಟೈಲ್, ಡ್ರೆಸಿಂಗ್​ ಸ್ಟೈಲ್​ ಅನ್ನ ಗಮನಿಸಿದ್ರೆ, ಇನ್ನು ಕೆಲವರು ಯಶ್​ ಕುತ್ತಿಗೆಯಲ್ಲಿರುವ ಚಿನ್ನದ ಸರ ಹಾಗೂ ಲಾಕೆಟ್​ ಅನ್ನ ಗಮಸಿದ್ದಾರೆ. ಅದು ಹುಲಿ ತಲೆಯ ಲಾಕೆಟ್​​ ಆಗಿದ್ದರಿಂದ ಎಲ್ಲರೂ ಕೆಲ ತಿಂಗಳ ಹಿಂದೆ ನಡೆದ ಹುಲಿ ಉಗುರಿನ ಪ್ರಕರಣವನ್ನ ನೆನಪಿಸಿಕೊಂಡಿದ್ದಾರೆ. ಒಂದು ರೀತಿ ಹೇಳುವುದಾದರೆ, ಈ ಪ್ರಕರಣದಲ್ಲಿ ಕೇಸ್​ ಸ್ಟಾರ್ ನಟರ ಮನೆಯನ್ನೆಲ್ಲಾ ಶೋಧಿಸುವ ಮಟ್ಟಿಗೆ ಹೋಗಿತ್ತು. ಈ ಪ್ರಕರಣದಲ್ಲಿ ಬಿಗ್ ಬಾಸ್​ ಖ್ಯಾತಿಯ ವರ್ತೂರು ಸಂತೋಷ್​ ಕೂಡ ಬಿಗ್​ ಬಾಸ್​ ಮನೆಯಲ್ಲಿರುವಾಗಲೇ ಜೈಲಿಗೆ ಹೋಗಿ, ಪುನಃ ಬಿಗ್​ ಮನೆಗೆ ವಾಪಸ್ಸಾಗಿದ್ರು. ಈಗ ಹುಲಿಯ ಲಾಕೆಟ್​ನ್ನೇ ಯಶ್​ ಹುಲಿಯನ್ನೆ ಧರಿಸಿದ್ದಾರೆ. ಏನಾಗುವುದೋ ಏನೋ? ರಾಜಾಹುಲಿ, ರಾಜಾಹುಲಿ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದು, ಇನ್ನು ಕೆಲವರು ಯಶ್ ಕುತ್ತಿಗೆಯಲ್ಲಿರುವ ಚಿನ್ನದ ಸರ ಹಾಗೂ ಲಾಕೆಟ್ ಬೆಲೆ ಎಷ್ಟಿರಬಹುದು ಅಂತ ಕಾಮೆಂಟ್ ಹಾಕ್ತಿದ್ದಾರೆ.

ಇನ್ನು ‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದು, ಸದ್ಯ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಭಾರೀ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಯಶ್ ಜೊತೆಗೆ ಈ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ನಟಿಸುತ್ತಿರುವುದು ಕನ್ಫರ್ಮ್ ​ ಆಗಿದೆ.

*ಸ್ವಾತಿ.ಎಸ್.

- Advertisement -

Latest Posts

Don't Miss