ಹಾಸನಾಂಬೆಯ ದರ್ಶನದ ವೇಳೆ ಪ್ರೀತಂಗೌಡರನ್ನು ತರಾಟೆಗೆ ತೆಗೆದುಕೊಂಡ ಭಕ್ತರು..

ಹಾಸನ : ಹಾಸನಾಂಬೆಯ ದರ್ಶನದ ವೇಳೆ  ಭಕ್ತರು ಪ್ರೀತಂಗೌಡರನ್ನು ತರಾಟೆಗೆ ತೆಗೆದುಕೊಂಡರು. ಹಲವು ಭಕ್ತರು ಸರತಿ ಸಾಲಿನಲ್ಲಿ ನಿಂತರೂ ಕೂಡ, ಅವರಿಗೆ ದೇವಿ ದರ್ಶನ ಸಿಗದ ಕಾರಣ, ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ದೇವಸ್ಥಾನದಿಂದ ಪ್ರೀತಂಗೌಡ ಹೊರಗೆ ಬರುತ್ತಿದ್ದ ವೇಳೆ ವಿಐಪಿಗಳನ್ನು ಮಾತ್ರ ಬಿಡುತ್ತಿದ್ದೀರಿ, ನಾವೇನು ಮಾಡಬೇಕು..? ನಾವು ಇಲ್ಲಿಯ ನಿಲ್ಲಬೇಕಾ ಹೇಳಿ ಸರ್..? ನೀವು, ರೇವಣ್ಣ ಎಷ್ಟು ಜನರನ್ನು ಒಳಗೆ ಕಳುಹಿಸುತ್ತಿದ್ದೀರಾ ನಾವು ನೋಡಿದ್ವಿ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಕ್ತರು ಪ್ರಶ್ನಿಸುತ್ತಿದ್ದಂತೆ ಶಾಸಕ ಪ್ರೀತಂಗೌಡ ತಬ್ಬಿಬ್ಬಾಗಿದ್ದು, ನಾನು ಯಾರನ್ನು ಬಿಟ್ಟಿಲ್ಲ, ನನ್ನ ಕೈಲಾದ ಕೆಲಸ‌ ಮಾಡಿದ್ದೀನಿ ಎಂದು ಹೇಳಿ ಶಾಸಕ ಪ್ರೀತಂಗೌಡ ಹೊರಟರು. ನಂತರ ಶಾಸಕರು, ಪೊಲೀಸರನ್ನು ಕರೆದು ಸೂಚನೆ ನೀಡಿದರು.

ದೇವಿ ದರ್ಶನ ಮಾಡಿದ ಸಚಿವ ಭೈರತಿ ಬಸವರಾಜು..

ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..

About The Author