Monday, December 23, 2024

Latest Posts

ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಡೆತ್ ಕೇಸ್: ಇಬ್ಬರು ಸಚಿವರ ವಿರುದ್ಧ ದೂರು ದಾಖಲು..!

- Advertisement -

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಸಚಿವರು ಮತ್ತವರ ಸಂಬಂಧಿಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ. ಅಬ್ರಾಂ ಎಂಬುವವರು, ಸಚಿವರಾದ ಭೈರತಿ ಬಸವರಾಜ್, ಅರಗ ಜ್ಞಾನೇಂದ್ರ, ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ, ಭೈರತಿ ಸಂಬಂಧಿಕರಾದ ಚಂದ್ರು ಮತ್ತು ಗಣೇಶ್ ವಿರುದ್ಧ ಕೆ.ಆರ್.ಪುಂ ಠಾಣೆಗೆ ಅಬ್ರಹಂ ದೂರು ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅಬ್ರಾಹಂ, ಬೈರತಿ ಬಸವರಾಜ್ ಅವರ ಸಂಬಂಧಿಗಳ ಕಿರುಕುಳವೇ ನಂದೀಶ್ ಹೃದಯಾಘಾತಕ್ಕೆ ಕಾರಣ. ಚಂದು ಹಾಗೂ ಗಣೇಶ್ ಹೇಳಿದ ಮಾತು ಕೇಳದೇ ಇದ್ದಕ್ಕೆ ಟಾರ್ಗೆಟ್ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಸಿಸಿಬಿಗೆ ಮಾಹಿತಿ ನೀಡಿ ದಾಳಿ ಮಾಡಿಸಲಾಗಿದೆ. ಅಲ್ಲದೆ, ನಂದೀಶ್ ಅವರನ್ನ ಅಮಾನತು ಮಾಡುವಂತೆ ಒತ್ತಡ ಹಾಕಲಾಗಿದೆ. ಅಲ್ಲದೆ ಪೋಸ್ಟಿಂಗ್ ಗಾಗಿ ಬೈರತಿ ಬಸವರಾಜ್ ಗೆ 50 ಲಕ್ಷ ಹಾಗೂ ಗೃಹ ಸಚಿವರಿಗೆ 20 ಲಕ್ಷ ನೀಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಅಲ್ಲದೇ ನಂದೀಶ್‌ರನ್ನು ಸಸ್ಪೆಂಡ್ ಮಾಡುವ ಮೊದಲು ನಂದೀಶ್ ಕಡೆಯಿಂದ ಮಾಹಿತಿ ಕೇಳಿಲ್ಲ. ನ್ಯಾಚರಲ್‌ ಜಸ್ಟೀಸ್ ಇಲ್ಲದೇ ನಂದೀಶ್ ಅವರನ್ನ ಅಮಾನತು ಮಾಡಲಾಗಿದೆ. ಹೀಗಾಗಿ ಎಲ್ಲರ ವಿರುದ್ದ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಲಾಗಿದ್ದು, ಎಫ್ಐಆರ್ ದಾಖಲಿಸದಿದ್ದಲ್ಲಿ ಕೋರ್ಟ್ ಗೆ ಹೋಗುವ ಬಗ್ಗೆ ಅಬ್ರಹಾಂ ಹೇಳಿದ್ದಾರೆ.

- Advertisement -

Latest Posts

Don't Miss