ಕ್ರೀಡೆ : ಐಸಿಸಿ ವರ್ಲ್ಡ್ ಕಪ್ ಸೆಮಿ ಫೈನಲ್ ಭಾರೀ ಕುತೂಹಲ ಮೂಡಿಸಿತ್ತು. ಕ್ರಿಕೆಟ್ ಅಭಿಮಾನಿಗಳು ಕಣ್ಣುಮಿಟುಕಸಿದೆ ಮ್ಯಾಚ್ ನೋಡ್ತಿದ್ರು. ತಾನು ಮ್ಯಾಚ್ ನೋಡುವ ಉದ್ದೇಶದಿಂದ ಎಂಟ್ರಿ ಕೊಟ್ಟ ಮಳೆರಾಯ ಎಲ್ಲರ ಆಸೆಗೆ ತಣ್ಣೀರು ಎರಚಿದ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ವಿಲಿಯಂಸನ್ 67ರನ್ ಗಳಿಸಿ ಔಟ್ ಆದ್ರು. ಇನ್ನು ರಾಸ್ ಟೇಲರ್ ಸಹ 67 ರನ್ ಗಳಿಸಿದ್ದು ಔಟಾಗದೇ ಉಳಿದಿದ್ದಾರೆ.. ಇನ್ನೇನು ನ್ಯೂಜಿಲೆಂಡ್ ಬ್ಯಾಟಿಂಗ್ ಮುಗೀತು ಅನ್ನೋ ವೇಳೆಗೆ ಮಳರಾಯ ಜೋರಾಗಿ ಎಂಟ್ರಿ ಕೊಟ್ಟ ಹಿನ್ನೆಲೆ ಪಂದ್ಯವನ್ನ 46 ವರ್ ಒಂದು ಬಾಲ್ ಆಗಿದ್ದಾಗ ನಿಲ್ಲಿಸಲಾಯ್ತು.
ಮತ್ತೆ ಮಳೆ ನಿಲ್ಲುತ್ತೋನೋ ಅಂತ ಕಾಯ್ದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಯ್ತು.. ಅಂತಿಮವಾಗಿ ಪಂದ್ಯವನ್ನ ಬುಧವಾರಕ್ಕೆ ಮುಂದೂಡಲಾಯ್ತು. ನ್ಯೂಜಿಲ್ಯಾಂಡ್ ಸದ್ಯದ ರನ್ ನೋಡಿದ್ರೆ ಭಾರತ ಗೆಲ್ಲುವ ಲಕ್ಷಣಗಳಿದೆ. ಆದ್ರೆ ನ್ಯೂಜಿಲೆಂಡ್ ಬೌಲರ್ ಗಳು ಭಾರತದ ಬ್ಯಾಟ್ಸ್ ಮನ್ ಗಳನ್ನ ಆರಂಭದಲ್ಲೆ ಕಟ್ಟಿಹಾಕಿದ್ರೆ ಪಂದ್ರ ಸ್ವಲ್ಪ ಕಠಿಣವಾಗಲಿದೆ.
ಯಸ್ ವೀಕ್ಷಕರೇ ಈ ಬಾರಿ ವಿಶ್ವಕಪ್ ಯಾರ್ ಗೆಲ್ತಾರೆ..? ಈ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ