Saturday, October 5, 2024

Latest Posts

‘ಸೋತರೂ ಮಂಡ್ಯ ಬಿಡೋದಿಲ್ಲ’- ನಿಖಿಲ್

- Advertisement -

ಮಂಡ್ಯ: ಲೋಕಸಭಾ ಚುನವಾಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರ್ ಮತ್ತೆ ಮಂಡ್ಯಕ್ಕೆ ತೆರಳಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಚುನಾವಣೆಯಲ್ಲಿ ಸೋತರೂ ಧೃತಿಗೆಡದ ನಿಖಿಲ್ ಕುಮಾರ್, ನಾನು ಸೋತಿದ್ದರೂ ಸಹ ಮಂಡ್ಯ ಕ್ಷೇತ್ರವನ್ನು ಬಿಡೋದಿಲ್ಲ ಅಂತ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಜಿಲ್ಲೆಯ ಮುಖಂಡರೊಂದಿಗೆ ನಿಖಿಲ್ ಕುಮಾರ್ ಸೋಲಿನ ಬಳಿಕ ಚರ್ಚೆ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಲಿನ ಪರಾಮರ್ಶೆ ನಡೆಸಿರೋ ನಿಖಿಲ್ ಕುಮಾರ್, ಮಂಡ್ಯದ ತಳಮಟ್ಟದಲ್ಲಿ ಜೆಡಿಎಸ್ ಸಂಘಟನೆಗೆ ಒಲವು ತೋರಿದ್ದು, ಮಂಡ್ಯದಲ್ಲಿ ತೋಟ, ಮನೆ ಕಟ್ಟೋವರೆಗೂ ಅಲ್ಲೆ ಶೆಡ್ ಹಾಕಿ ವಾಸ ಮಾಡೋದಕ್ಕೂ ನಾನು ಸಿದ್ಧ ಅಂತ ನಿಖಿಲ್ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದ್ದಾರೆ.

ಇನ್ನು ನಿಖಿಲ್ ಕುಮಾರ್ ಚುನಾವಣೆಯಲ್ಲಿ ಸೋತರೂ ಸಹ ಇಷ್ಟು ಉತ್ಸಾಹ ತೋರುತ್ತಿರೋದು ಜೆಡಿಎಸ್ ಮುಖಂಡರಲ್ಲಿ ಸಂತಸ ಮೂಡಿಸಿದೆ.

ಕುಮಾರಣ್ಣನ ನಿರ್ಧಾರಕ್ಕೆ ಹಳ್ಳಿ ಜನ ಫುಲ್ ಖುಷ್…! ಅಂಥಾದ್ದು ಏನ್ ಹೇಳಿದ್ರು ಸಿಎಂ..?ಮಿಸ್ ಮಾಡದೇ ಈ ವಿಡಿಯೋ ನೋಡಿ.

- Advertisement -

Latest Posts

Don't Miss