ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ನಿಖಿಲ್ ಇದೀಗ ಪಕ್ಷದ ಬಹುಮುಖ್ಯ ಜವಾಬ್ದಾರಿಯನ್ನ ಹೊರಲಿದ್ದಾರೆ. ರಾಜ್ಯಾದ್ಯಂತ ಜೆಡಿಎಸ್ ಕೈಗೊಳ್ಳಲಿರೋ ಪಾದಯಾತ್ರೆಯ ನಾಯಕತ್ವವನ್ನು ನಿಖಿಲ್ ಕುಮಾರ್ ವಹಿಸಿಕೊಳ್ಳಲಿದ್ದಾರೆ.
ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಪಕ್ಷ ಸಂಘಟನೆಗೆ ಮಾಡಲು ಸಜ್ಜಾಗಿರೋ ಜೆಡಿಎಸ್ ಇದೀಗ ಸಕಲ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ 2 ಹಂತಗಳಲ್ಲಿ ನಡೆಯೋ ಜೆಡಿಎಸ್ ಪಾದಯಾತ್ರೆಯ ಉಸ್ತುವಾರಿ, ನಾಯಕತ್ವದ ಜವಾಬ್ದಾರಿಯನ್ನು ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ವಹಿಸಿಕೊಳ್ಳಲಿದ್ದಾರೆ. ಇನ್ನು ಹಳೇ ಮೈಸೂರು ಭಾಗಗಳಲ್ಲಿ ನಡೆಯಲಿರೋ ಪಾದಯಾತ್ರೆಯಲ್ಲಿ ಪಕ್ಷದ ಬಲವರ್ಧನೆಯೊಂದಿಗೆ ಜನರನ್ನು ತಲುಪೋ ಪ್ರಯತ್ನ ನಡೆಸಲಿದ್ದಾರೆ.
ಇನ್ನು ಪಾದಯಾತ್ರೆ ವೇಳೆ ವಯೋಸಹಜವಾಗಿ ಉಂಟಾಗೋ ಆಯಾಸದಿಂದಾಗಿ ದೇವೇಗೌಡರು ಸಕ್ರಿಯವಾಗಿ ಭಾಗಿಯಾಗಲು ಸಾಧ್ಯವಿಲ್ಲ. ಇನ್ನು ಸಿಎಂ ಕುಮಾರಸ್ವಾಮಿ ಕೂಡ ಮೈತ್ರಿ ಸರ್ಕಾರದಲ್ಲಿ ಉಂಟಾಗಿರೋ ಅಭದ್ರತೆ ಸರಿಪಡಿಸೋ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಅಲ್ಲದೆ ಅವರಿಗೂ ಆರೋಗ್ಯ ಸಮಸ್ಯೆ ಇರೋದ್ರಿಂದ ಪಾದಯಾತ್ರೆಯಲ್ಲಿ ಭಾಗಿಯಾಗೋದು ಕೊಂಚ ಅನುಮಾನವೇ. ಹೀಗಾಗಿ ಯುವರಾಜ ನಿಖಿಲ್ ತಳಮಟ್ಟದ ಕಾರ್ಯಕರ್ತರನ್ನು ಪ್ರೋತ್ಸಾಹಿಸೋ ಮೂಲಕ ಜನರಿಗೆ ಹತ್ತಿರವಾಗಲು ಅನುವಾಗುವಂತೆ ದಳಪತಿಗಳು ಪಾದಯಾತ್ರೆ ತಂತ್ರ ಅನುಸರಿಸಲಿದ್ದಾರೆ.
ಪಾದಯಾತ್ರೆಗೆ ನಿಖಿಲ್ ನಾಯಕತ್ವ..! ಮಿಸ್ ಮಾಡದೇ ಈ ವಿಡಿಯೋ ನೋಡಿ