Saturday, April 12, 2025

Latest Posts

ಹಾಸನದಲ್ಲಿ ಶಮಿ ಪೂಜೆ ನೆರವೇರಿಸಿದ ನಿರ್ಮಲಾನಂದ ಶ್ರೀಗಳು..

- Advertisement -

ಹಾಸನ: ನಾಡಿನಾದ್ಯಂತ ವಿಜಯದಶಮಿ ಹಿನ್ನೆಲೆ ಚೆನ್ನಪಟ್ಟಣ ತಾಲೂಕಿನ ಕುಂದೂರು ಮಠದ ಮೆಳಿಯಮ್ಮ ದೇಗುಲದಲ್ಲಿ ಬನ್ನಿ ಪೂಜೆ ನೆರವೇರಿಸಲಾಯಿತು. ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಬನ್ನಿ ಕಡಿದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.  ಸಂಭ್ರಮದ ಶಮಿ ವೃಕ್ಷಪೂಜೆಯಲ್ಲಿ ಸಹಸ್ರಾರು ಜನರು ಭಾಗಿಯಾಗಿದ್ದರು.

ಬಹಳ ಪಸಂದಾಗಿದೆ “ದಿಲ್ ಪಸಂದ್” ಟೀಸರ್…

ಪ್ರತೀ ವರ್ಷ ಮಠದ ಅಧೀನಕ್ಕೊಳಪಟ್ಟ ಮೆಳಿಯಮ್ಮ ದೇಗುಲದ ಆವರಣದಲ್ಲಿ ವಿಜಯದಶಮಿಯಂದು ಶಮಿ ಪೂಜೆ ಮಾಡಿ ಬನ್ನಿ ಕಡಿಯೋ ಆಚರಣೆ ಇಲ್ಲಿದೆ. ಈ ವರ್ಷ ಪೂಜೆ ಸಲ್ಲಿಸಿದ ಬಳಿಕ ವಿಜಯ ದಶಮಿಯ ಶುಭಕೋರಿ, ನಿರ್ಮಲಾನಂದ ಶ್ರೀಗಳು ಮಾತನಾಡಿದ್ದು, ಪ್ರತಿ ವರ್ಷದಂತೆ ಕುಂದೂರು ಮಹಾಸಂಸ್ಥಾನದಲ್ಲಿಯೂ ಕೂಡಾ ಈ ವರ್ಷವೂ  ವಿಜಯದಶಮಿಯನ್ನು ಆಚರಿಸಲಾಗಿತ್ತಿದೆ. ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ನಾಡಿನಲ್ಲಿರುವ ದುಷ್ಟ ಶಕ್ತಿಗಳು, ಮನಸ್ಸಿನಲ್ಲಿರುವ ದುಷ್ಟ ಗುಣಗಳು, ಸೇರಿ ಎಲ್ಲವನ್ನೂ ಹೋಗಲಾಡಿಸುವ ಈ ಸಂದರ್ಭದಲ್ಲಿ ಒಂಭತ್ತು ದಿನಗಳ ಸಾಧನೆ ತುಂಬಾ ಮುಖ್ಯವಾಗಿರುವಂತಹದ್ದು.

‘ಸ್ವಾತಿ ಮುತ್ತಿನ ಮಳೆ ಹನಿ’ಗಾಗಿ ಜೊತೆಯಾದ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ..

ನಾಡಿನಲ್ಲಿರುವ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು, ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಯ ವಿಷಯದಲ್ಲಿರುವ ದುಷ್ಟ ಗುಣಗಳನ್ನು ಹೋಗಲಾಡಿಸಲು, ಈ ಒಂಭತ್ತು ರಾತ್ರಿಗಳು, ಒಂಭತ್ತು ದಿನಗಳು ಮಾಡಿರುವ ಸಾಧನೆ  ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ನಿರ್ಮಲಾನಂದ ಶ್ರೀಗಳು ಹೇಳಿದ್ದಾರೆ.

- Advertisement -

Latest Posts

Don't Miss