Saturday, June 21, 2025

Latest Posts

9ನೇಯ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್

- Advertisement -

Patna Political News: ಇಂಡಿಯಾ ಮೈತ್ರಿ ಕೂಡ ಬಿಟ್ಟು ಬಿಜೆಪಿ ಜೊತೆ ಕೈಜೋಡಿಸಿರುವ ನಿತೀಶ್ ಕುಮಾರ್, 9ನೇಯ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹಲವು ದಿನಗಳಿಂದ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಕಡೆಯಿಂದ ಮತ್ತೆ ಸಿಎಂ ಆಗ್ತಾರೆ ಅಂತಾ ಹೇಳಲಾಗುತ್ತಿತ್ತು. ಇಂದು ಬೆಳಿಗ್ಗೆ ನಿತೀಶ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಜೆಡಿಯು- ಬಿಜೆಪಿ ಮೈತ್ರಿಯ ಸಿಎಂ ಸ್ಥಾನವನ್ನು ಅಲಂಕರಿಸಿದ್ದಾರೆ. ಸಂಜೆ ಹೊತ್ತಿಗೆ ಪದಗ್ರಹಣ ಕಾರ್ಯಕ್ರಮ ನಡೆದಿದ್ದು, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ನಿತೀಶ್ ಅವರಿಗೆ ಪ್ರತಿಜ್ಞಾವಿಧಿ ಸಂಬೋಂಧಿಸಿದ್ದಾರೆ.

ಇದೇ ವೇಳೆ ಬಿಜೆಪಿ ಶಾಸಕ ಸಾಮ್ರಾಟ್ ಚೌಧರಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರೊಂದಿಗೆ ಹಲವು ಬಿಜೆಪಿ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ನಿತೀಶ್ ಕುಮಾರ್ ಅವರ ಪಕ್ಷವಾದ ಜೆಡಿಯು ಪಕ್ಷ ಒಂದು ಬಾರಿಯೂ ಬಹುಮತ ಪಡೆಯಲಿಲ್ಲ. ಆದರೂ ಕೂಡ ಹಲವು ಬಾರಿ ಸಿಎಂ ಆಗಿ, ಅಧಿಕಾರ ನಿರ್ವಹಿಸಿದ್ದಾರೆ.

‘ನಾವು ಬಿಹಾರಕ್ಕೆ ಹೋಗೋದು‌ ಬೇಡಾ, ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೊಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ’.

ಏಕಾಏಕಿ ಹನುಮಧ್ವಜ ಕೆಳಗಿಳಿಸಿ, ರಾಮನ ಬ್ಯಾನರ್ ಕಿತ್ತು ಹಾಕಿರುವುದು ಸರಿಯಾದ ಕ್ರಮವಲ್ಲ: ಸಂಸದೆ ಸುಮಲತಾ

ಕೇಂದ್ರದಿಂದ ಐಟಿ-ಇಡಿ ಬೆದರಿಕೆ ಇದ್ದಿದ್ದರೆ 9 ತಿಂಗಳ ಹಿಂದೆ ಮಾಡಬೇಕಿತ್ತು: ಜಗದೀಶ್ ಶೆಟ್ಟರ್

- Advertisement -

Latest Posts

Don't Miss