Sunday, September 8, 2024

Latest Posts

ವಿಚ್ಛೇದನಕ್ಕೆ 5 ಕಾರಣ ಬಿಚ್ಚಿಟ್ಟ ನಿವೇದಿತಾ-ಚಂದನ್ ಶೆಟ್ಟಿ

- Advertisement -

Sandalwood News: ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದಿರುವ ಸುದ್ದಿ ಗೊತ್ತೇ ಇದೆ. ಡಿವೋರ್ಸ್ ಬೆನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸುದ್ದಿಗೋಷ್ಠಿ ನಡೆಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಪ್ರಶ್ನೆ: ಮಕ್ಕಳನ್ನು ಮಾಡಿಕೊಳ್ಳುವ ಸಂಬಂಧ ಇಬ್ಬರ ನಡುವೆ ಕಿತ್ತಾಟ ನಡೆಯಿತಾ?
ಉತ್ತರ: ನಾಲ್ಕು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಮಕ್ಕಳನ್ನು ಮಾಡಿಕೊಳ್ಳುವ ಸಂಬಂಧ ಕಿತ್ತಾಟ ಮಾಡಿಕೊಂಡಿದೆ. ಇದೇ ಕಾರಣಕ್ಕೆ ವಿಚ್ಛೇಧನ ಮಾಡಿಕೊಂಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹರಿದಾಡಿದ್ದವು. ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಚಂದನ್, ಹೊಂದಾಣಿಕೆ ಕಾರಣದಿಂದ ವಿಚ್ಛೇದನವಾಗಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.

ಪ್ರಶ್ನೆ: ನಿವೇದಿತಾಗೆ ಜೀವನಾಂಶ ನೀಡಿದ್ರಾ ಚಂದನ್ ಶೆಟ್ಟಿ?
ಉತ್ತರ: ನಾನು ನಿವೇದಿತಾಗೆ ಯಾವುದೇ ಜೀವನಾಂಶ ಕೊಟ್ಟಿಲ್ಲ. ನಿವೇದಿತಾ ಕೂಡ ಜೀವನಾಂಶ ಕೊಡು ಎಂದು ಕೇಳಿಲ್ಲ. ಜೀವಾನಂಶ ಸಂಬಂಧ ನಾವು ಕೋರ್ಟ್​ಗೆ ಹೋಗಿಲ್ಲ. ಅವ್ರ ಖರ್ಚನ್ನ ಅವ್ರೆ ನೋಡ್ಕೋತಿದ್ದಾರೆ‌. ಅವ್ರ ಖರ್ಚನ್ನು ಅವ್ರೆ ನೋಡ್ಕೋತಿದ್ದಾರೆ‌. ಇಬ್ಬರೂ ಕೂಡ ಒಪ್ಪಿಕೊಂಡೇ ಮಕ್ಕಳ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಚಂದನ್ ಸ್ಪಷ್ಟನೆ ನೀಡಿದ್ಧಾರೆ.

ಪ್ರಶ್ನೆ: ಇಬ್ಬರ ನಡುವೆ ಮನಸ್ತಾನ ಇತ್ತಾ?
ಉತ್ತರ: ನನಗೂ ಹಾಗೂ ನಿವೇದಿತ ಮಧ್ಯೆ ಮಗು ವಿಚಾರದಲ್ಲಿ ಯಾವುದೇ ಜಗಳ ಇಲ್ಲ. ಭವಿಷ್ಯ ದೃಷ್ಟಿಯಿಂದ ನಾವು ವಿಚ್ಛೇದನ ಪಡೆದುಕೊಂಡಿದ್ದೇವೆ. ಆದರೆ, ಇಬ್ಬರ ನಡುವೆ ಯಾವುದೇ ಮನಸ್ತಾಪ ಉಂಟಾಗಿಲ್ಲ. ನಮ್ಮಿಬ್ಬರ ಕನಸುಗಳು ತುಂಬಾ ಇದೆ ಎಂದು ಚಂದನ್ ಹಾಗೂ ನಿವೇದಿತಾ ಹೇಳಿದ್ದಾರೆ.

ಪ್ರಶ್ನೆ: ನಿಮ್ಮ ಜೀವನದಲ್ಲಿ 3ನೇ ವ್ಯಕ್ತಿ ಎಂಟ್ರಿ ಆಗಿದ್ರಾ?
ಉತ್ತರ: ನಮ್ಮ ಮಧ್ಯೆ ಯಾವುದೇ 3ನೇ ವ್ಯಕ್ತಿ ಎಂಟ್ರಿ ಆಗಿಲ್ಲ. ಮೂರನೇ ವ್ಯಕ್ತಿ ಯಾರು ಎಂದು ನಮಗೂ ಗೊತ್ತಿಲ್ಲ. ಅವರಿಗೂ ಒಂದು ಕುಟುಂಬ ಇದೆ. ಅವರಿಗೂ ನಾನು ಕ್ಷಮೆ ಕೋರಿದ್ದೇನೆ ಸೋಶಿಯಲ್ ಮೀಡಿಯಾಗಳಲ್ಲಿ ವಿನಃ ಕಾರಣ ಸುದ್ದಿಗಳನ್ನು ವೈರಲ್ ಮಾಡಬಾರದು ಎಂದು ನಿವೇದಿತಾ-ಚಂದನ್ ಮನವಿ ಮಾಡಿದ್ದಾರೆ.

ಪ್ರಶ್ನೆ: ಯಾವಾಗಿನಿಂದ ಚಂದನ್-ನಿವೇದಿತಾ ದೂರ ದೂರ?
ಉತ್ತರ: ನಾವು ಒಂದು ವರ್ಷದಿಂದ ವಿಚ್ಚೇಧನ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿತ್ತು. ಈ ಕುರಿತು ನಮ್ಮ ಕುಟುಂಬದಲ್ಲಿ ಚರ್ಚೆ ನಡೆಸಿದ್ದೇವೆ. ಹೊಂದಾಣಿಕೆಯ ಕೊರತೆಯಿಂದಾಗಿ ವಿಚ್ಛೇದನವಾಗಿದೆ. ಇದಕ್ಕೆ ಬೇರೆ ಊಹಾಪೋಹ ಕಲ್ಪಿಸಬೇಕಿಲ್ಲ ಎಂದು ಹೇಳಿದ್ದಾರೆ.

ಪ್ರಶ್ನೆ: ಹೈದರಾಬಾದ್ ಮೂಲದ ವ್ಯಕ್ತಿ ಯಾರು?
ಉತ್ತರ: ಹೈದರಾಬಾದ್ ಮೂಲದ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಅದೆಲ್ಲಾ ಅಪ್ಪಟ ಸುಳ್ಳು ಎಂದು ನಿವೇದಿತಾ ಹೇಳಿದ್ದಾರೆ.

ಉಪಚುನಾವಣೆ ದಿನಾಂಕ ಘೋಷಣೆ

ದೊಡ್ಮನೆಯ ಕುಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ- ಯುವ ದಾಂಪತ್ಯದಲ್ಲಿ ಬಿರುಗಾಳಿ!

- Advertisement -

Latest Posts

Don't Miss