National Political News: ಉತ್ತರಪ್ರದೇಶದ ಪ್ರಸಿದ್ಧ ದೇವಸ್ಥಾನಗಳ ಬಳಿ, ದೇವಸ್ಥಾನದ ಎತ್ತರ ಮೀರಿ, ಯಾವುದೇ ಬಹುಮಹಡಿ ಕಟ್ಟಡ ಕಟ್ಟುವಂತಿಲ್ಲವೆಂದು, ಉತ್ತರಪ್ರೇದಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.
ಮಥುರಾ, ವಾರಣಾಸಿ-ವೃಂದಾವನ, ಗೋರಖಪುರದಲ್ಲಿರುವ ದೇವಸ್ಥಾನಗಳ ಇತಿಹಾಸ, ಸಾರವನ್ನು ಕಾಪಾಡಲು, ಸಿಎಂ ಯೋಗಿ ಆದಿತ್ಯನಾಥ್ ಈ ನಿರ್ಧಾರ ಕೈಗೊಂಡಿದ್ದಾರೆಂದು ಹೇಳಿದ್ದಾರೆ. ಹಾಗಾಗಿ ಇಂಥ ಪ್ರಸಿದ್ಧ ದೇವಾಲಯಗಳ ಎತ್ತರವನ್ನೂ ಮೀರಿ, ಈ ದೇವಸ್ಥಾನಗಳ ಬಳಿ ಬಹುಮಹಡಿ ಕಟ್ಟಡವನ್ನು ಕಟ್ಟುವಂತಿಲ್ಲವೆಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈಗಾಗಲೇ ಉತ್ತರಪ್ರದೇಶದ ಅಭಿವೃದ್ಧಿಗಾಗಿ ಯೋಗಿ ಆದಿತ್ಯನಾಥ ಸಾಕಷ್ಟು ಪ್ಲಾನ್ ಮಾಡಿದ್ದು, ಯೋಜನೆಗಳನ್ನು ಜಾರಿಗೆ ತಂದು, ಉತ್ತರಪ್ರದೇಶವನ್ನು ಅಭಿವೃದ್ಧಪಡಿಸಿದ್ದಾರೆ. ಇಂಧನ ಬಸ್‌ಗಿಂತ, ಎಲೆಕ್ಟ್ರಿಕ್ ಬಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉತ್ತರಪ್ರದೇಶ ಸೇಫ್ ಸ್ಟೇಟ್ ಆಗುವುದರ ಜೊತೆಗೆ, ಅಭಿವೃದ್ಧಿಯೂ ಗೊಳ್ಳುತ್ತಿದೆ.
‘ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ’