Political News: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮತ್ತೆ ಮರಳಿ ಬಿಜೆಪಿ ಸೇರಿದ್ದಾರೆ. ಈ ಬಗ್ಗೆ ಶೆಟ್ಟರ್ ಜೊತೆ ಕರ್ನಾಟಕ ಟಿವಿ ಸಂದರ್ಶನ ನಡೆಸಿದ್ದು, ಇದರಲ್ಲಿ ಶೆಟ್ಟರ್ ಕೆಲವೊಂದು ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಹೋದ ಬಗ್ಗೆ ಮಮತ್ತು ಕಾಂಗ್ರೆಸ್ ಬಿಟ್ಟು ಬಂದ ಬಗ್ಗೆ ಶೆಟ್ಟರ್ ವಿವರಿಸಿದ್ದಾರೆ.
ಜಗದೀಶ್ ಶೆಟ್ಟರ್ ವಿಧಾನಸಭೆ ಎಲೆಕ್ಷನ್ ಸಮಯದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದು ಎಷ್ಟು ಸತ್ಯವೋ, ಶೆಟ್ಟರ್ ಅವರು ಕೂಡ ಕಾಂಗ್ರೆಸ್‌ಗೆ ಅತಿದೊಡ್ಡ ಶಕ್ತಿಯಾಗಿದ್ದರು ಅನ್ನೋದು ಅಷ್ಟೇ ಸತ್ಯ ಅನ್ನೋ ಮಾತನ್ನು ಶೆಟ್ಟರ್ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಶೆಟ್ಟರ್ ಕಾಂಗ್ರೆಸ್ ಬಿಟ್ಟರು ಅನ್ನೋದು ದೊಡ್ಡ ವಿಚಾರವೇ ಅಲ್ಲ. ಅದಕ್ಕಾಗಿ ಯಾಕಿಷ್ಟು ಟೀಕೆ ಟಿಪ್ಪಣಿ ಮಾಡಬೇಕೋ ಗೊತ್ತಿಲ್ಲವೆಂದು ಶೆಟ್ಟರ್ ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡಿದ ಶೆಟ್ಟರ್, ಅದು ಒಳ್ಳೆಯ ಕಾರ್ಯಕ್ರಮ. ಅದರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಆದರೆ ಅದು ನೂರಕ್ಕೆ ನೂರು ಅನುಷ್ಠಾನವಾಗಿದೆಯೋ, ಇಲ್ಲವೋ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಪೂರ್ಣವಾಗಿ ಅನುಷ್ಠಾನವಾಗಿದ್ದರೆ, ಅದರ ಪರಿಣಾಮವಂತೂ ಇದ್ದೇ ಇರುತ್ತದೆ ಎಂದಿದ್ದಾರೆ.
ಆದರೆ ಲೋಕಸಭೆ ಎಲೆಕ್ಷನ್ ಅನ್ನುವಂಥದ್ದು ರಾಷ್ಟ್ರ ರಾಜಕಾರಣದ ಮೇಲೆ ಅವಲಂಬಿತವಾಗಿರುತ್ತದೆ. ಜನರ ದೃಷ್ಟಿಕೋನ, ದೇಶ ಯಾರ ಕೈಯಲ್ಲಿ ಬಲಿಷ್ಠವಾಗಿದೆ ಎಂಬುದರ ಮೇಲೆ ಇರುತ್ತದೆ. ರಾಜ್ಯದಲ್ಲಿ ಏನೇ ಕಾರ್ಯಕ್ರಮ ಮಾಡಿದರೂ, ಮೋದಿಯವರ ಕೆಲಸವನ್ನು ಅದು ಓವರ್ ಟೇಕ್ ಮಾಡಲು ಸಾಧ್ಯವಿಲ್ಲವೆಂದು ಶೆಟ್ಟರ್ ಹೇಳಿದ್ದಾರೆ.
ಶೆಟ್ಟರ್ ವಿಷಯದಲ್ಲಿ ಡಿಕೆಶಿ- ಸಿದ್ದರಾಮಯ್ಯ ಮಾಡಿದ ತಪ್ಪೇನು..? ಶೆಟ್ಟರ್ ಹೇಳಿದ್ದೇನು..?
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ