Hubli Political News: ಹುಬ್ಬಳ್ಳಿ:ಕಾಂಗ್ರೆಸ್ ಸಚಿವ ಹೆಚ್.ಕೆ.ಪಾಟೀಲ್ ಹುಬ್ಬಳ್ಳಿಯಲ್ಲಿ ಮೀಡಿಯಾ ಜೊತೆ ಮಾತನಾಡಿದ್ದು, ಶಂಕರ್ ಪಾಟೀಲ್ ಮುನೆನಕೊಪ್ಪ ಯಾವ ಪಕ್ಷದಲ್ಲಿದ್ದಾರೆ ಆ ಪಕ್ಷಕ್ಕೆ ಶೆಟ್ಟರ್ ರನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಪಕ್ಷ ಬಿಟ್ಟು ಶೆಟ್ಟರ್ ವಾಪಸು ಹೋಗಬಾರದಿತ್ತು ಅನ್ನೊದಷ್ಟೆ ನಮ್ಮ ನೋವು. ಲಕ್ಷ್ಮಣ ಸವದಿ ನಾನು ಕಾಂಗ್ರೆಸ್ ನಲ್ಲೇ ಇರುತ್ತೇನೆ ಯಾವುದೇ ಕಾರಣಕ್ಕೂ ಬದಲಾವಣೆ ಆಗಲ್ಲ ಅಂತ ಹೇಳಿದ್ದಾರೆ. ಲಕ್ಷ್ಮಣ ಸವದಿ ಮತ್ತು ನನ್ನ ಒಡನಾಟ ಬಹಳಷ್ಟು ಹಳೆಯದು. ಸವದಿ ಏನು ಹೇಳತ್ತಾರೆ ಹಾಗೇ ನಡೆದುಕೊಳ್ಳುತ್ತಾರೆ. ಲಕ್ಷ್ಮಣ ಸವದಿಯವರ ಮೇಲೆ ಅಪನಂಬಿಕೆ, ಸಂಶಯವಿಲ್ಲ. ಅವರು ನಮ್ಮ ಪಾರ್ಟಿಯಲ್ಲಿಯೇ ಇರ್ತಾರೆ ಎನ್ನುವ ಸಂಪೂರ್ಣ ನಂಬಿಕೆ ನನ್ನದು ಎಂದು ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲರು, ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ನೀಡಲು ಕುಮಾರಸ್ವಾಮಿ ಎಳ್ಳಷ್ಟು ಹಿಂದೆ ಮುಂದೆ ನೋಡಲ್ಲಾ ಎಂದು ಪಾಟೀಲ್ ಹೇಳಿದ್ದಾರೆ.
ಇನ್ನು ಮಂಡ್ಯ ಧ್ವಜ ವಿಚಾರದ ಬಗ್ಗೆ ಮಾತನಾಡಿದ ಪಾಟೀಲರು, ಸರ್ಕಾರಕ್ಕೆ ಏನು ವಿವಾದವಿಲ್ಲ. ಬಿಜೆಪಿಯವರಯ ಹತಾಶೆಗೊಂಡಿದ್ದಾರೆ. ಹೀಗಾಗಿ ಭಾವನಾತ್ಮಕ ವಿಷಯಗಳ ಮೇಲೆ ಏನಾದರೂ ಮಾಡಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಜನರ ಗಮನದಿಂದ ದೂರ ಮಾಡಬೇಕೆಂದು ಪ್ರಯತ್ನವೇ ಈ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದರ ಏನು ಆಗುವುದಿಲ್ಲ ಜನ ಅರ್ಥ ಮಾಡಿಕೊಳ್ಳತ್ತಾರೆ ಎಂದು ಪಾಟೀಲರು ಹೇಳಿದ್ದಾರೆ.
ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ