Saturday, July 27, 2024

Latest Posts

ಇನ್ನು ಮುಂದೆ ಅಯೋಧ್ಯಾ ರಾಮಮಂದಿರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ

- Advertisement -

Uttar Pradesh: ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ ಮೊದಲಿನಿಂದಲೂ ಮೊಬೈಲ್ ಬ್ಯಾನ್ ಮಾಡಬೇಕು ಅನ್ನುವ ರೂಲ್ಸ್ ಜಾರಿಗೆ ತರಲಾಗುತ್ತೆ ಅಂತಾ ಹೇಳಲಾಗಿತ್ತು. ಅಲ್ಲದೇ, ಯಾರು ಮೊಬೈಲ್ ಅಥವಾ ಯಾವುದೇ ವಸ್ತುವನ್ನು ಕೈಯಲ್ಲಿ ಹಿಡಿಯದೇ, ದರ್ಶನಕ್ಕೆ ಬರುತ್ತಾರೋ, ಅಂಥ ಭಕ್ತರಿಗೆ ಬೇಗ ದರ್ಶನ ಮಾಡಿಕಳಿಸಲಾಗುತ್ತದೆ ಅಂತಾ ಹೇಳಲಾಗಿತ್ತು.

ಇದೀಗ ಸ್ಟ್ರಿಕ್ಟ್ ಆಗಿ ರಾಮಲಲ್ಲಾನ ದರ್ಶನಕ್ಕೆ ಬರುವವರು ಮೊಬೈಲ್ ಬಿಟ್ಟು ಬರಬೇಕು ಅಂತಾ ರೂಲ್ಸ್ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ದೇವಸ್ಥಾನ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದ್ದು, ದರ್ಶನ ಬೇಗ ಆಗಬೇಕು ಎಂದು ಮೊಬೈಲ್ ನಿಷೇಧಿಸಿದೆ.

ರರಾಮನ ದರ್ಶನಕ್ಕೆ ಬರುವಾಗ ಭಕ್ತರ ಕೈಯಲ್ಲಿ ಮೊಬೈಲ್, ಅಥವಾ ಬ್ಯಾಗ್ ಇದ್ದರೆ, ಅದನ್ನು ಚೆಕ್ ಮಾಡಿ ಬಿಡುವಾಗಲೇ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಬೇಗ ಬೇಗ ಭಕ್ತರು ರಾಮನ ದರ್ಶನ ಮಾಡಲು ಆಗುವುದಿಲ್ಲ. ಅಲ್ಲದೇ, ದೇವಸ್ಥಾನದ ಸಿಬ್ಬಂದಿಗಳಿಗೂ ಇದರಿಂದ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ, ಮೊಬೈಲ್ ಬ್ಯಾನ್ ಮಾಡುವ ನಿರ್ಧಾರ ಮಾಡಲಾಗಿದೆ.

ಹಾಾಗಾದ್ರೆ ನಮ್ಮ ಮೊಬೈಲ್ ನಾವು ಎಲ್ಲಿಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಇದಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿ, ವ್ಯವಸ್ಥೆಯನ್ನೂ ಮಾಡಿದೆ. ಭಕ್ತರಿಗಾಗಿ ಲಾಕರ್ ವ್ಯವಸ್ಥೆ ಮಾಡಿದ್ದು, ಈ ಲಾಕರ್‌ನಲ್ಲಿ ನೀವು ಮೊಬೈಲ್ ಜೊತೆ ಬೇರೆ ಬೇರೆ ಬೆಲೆ ಬಾಳುವ ವಸ್ತುಗಳನ್ನು ಸಹ ಇಡಬಹುದು. ಬಳಿಕ ಹೋಗುವಾಗ, ನಿಮ್ಮ ಲಾಕರ್‌ ನೀವೇ ಓಪೆನ್ ಮಾಡಿ, ನಿಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.

ಅಂಜಲಿ ಹಂತಕನಿಗೆ ಸಿಐಡಿ ಅಧಿಕಾರಿಗಳ ಡ್ರಿಲ್: ಚುರುಕುಗೊಂಡ ತನಿಖೆ..!

ಹೆಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್ ಪಿತಾಮಹ: ಕೆ.ಎನ್.ರಾಜಣ್ಣ

ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ

- Advertisement -

Latest Posts

Don't Miss