National Political News: ಪಂಜಾಬ್, ಹರಿಯಾಣಾದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಇದೇ ವೇಳೆ ಉತ್ತರಪ್ರದೇಶದ ಸಿಎಂ ತಮ್ಮ ರಾಜ್ಯದಲ್ಲಿ ಹೊಸ ರೂಲ್ಸ್ ತಂದಿದ್ದು, ಇನ್ನು 6 ತಿಂಗಳು ಯಾರೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡುವಂತಿಲ್ಲ ಎಂದಿದ್ದಾರೆ.
ಸರ್ಕಾರದ ಅಡಿಯಲ್ಲಿರುವ ಸರ್ಕಾರಿ ನಿಗಮ, ಇಲಾಖೆ, ಪ್ರಾಧಿಕಾರಿಗಳು ಪ್ರತಿಭಟನೆ ನಡೆಸುವಂತಿಲ್ಲವೆಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಹಾಗೇನಾದರೂ ನಿಯಮ ಉಲ್ಲಂಘಿಸಿ, ಪ್ರತಿಭಟನೆ ನಡೆಸಿದರೇ, ಯಾವುದೇ ವಾರಂಟ್ ಇಲ್ಲದೇ, ಪ್ರತಿಭಟನಾಕಾರರನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಎಸ್ಮಾ ಕಾಯಿದೆ ಎನ್ನಲಾಗಿದ್ದು, ಕಳೆದ ವರ್ಷ ಕೂಡ 6 ತಿಂಗಳು ಯಾರೂ ಮುಷ್ಕರ ಮಾಡುವಂತಿಲ್ಲವೆಂದು ಹೇಳಲಾಗಿತ್ತು. ಆ ಸಮಯದಲ್ಲಿ ವಿದ್ಯುತ್ ಇಲಾಖೆಯವರು ಪ್ರತಿಭಟನೆ ನಡೆಸಿದ್ದರು. ಈ ಕಾರಣಕ್ಕಾಗಿ ರಾಜ್ಯದಲ್ಲಿ ಈ ಕಾಯ್ದೆ ಜಾರಿಗೆ ತರಲಾಗಿತ್ತು. ಇದೀಗ 2024ರಲ್ಲಿಯೂ ಇದೇ ರೂಲ್ಸ್ ಜಾರಿಗೆ ತರಲಾಗಿದೆ. ಚುನಾವಣೆ ಸಮೀಪಿಸುತ್ತಿದ್ದು, ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ರೂಲ್ಸ್ ತಂದಿರುವ ಸಾಧ್ಯತೆ ಇದೆ.
‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’
‘ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್ಗೆ ಅನುಕೂಲ ಆಗಲ್ಲ ಅಂತ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ’
‘ನಮ್ಮ ಹಾಸನ ಜಿಲ್ಲೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಸಂಪೂರ್ಣ ಫೇಲ್ಯೂರ್ ಆಗಿರುವ ಬಜೆಟ್’